ತಿರುಮಲಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀನುಗಾರರ ಸಹಕಾರ ಸಂಘದಿಂದ ತೊಣ್ಣೂರು ಕೆರೆಗೆ ಸುಮಾರು ಐದು ಲಕ್ಷ ಕಾಟ್ಲಾ ಮೀನು ಮರಿಗಳನ್ನು ಸೋಮವಾರ ಬಿಡಲಾಯಿತು.
Published on:
Copied
Follow Us
ಪಾಂಡವಪುರ: ತಾಲೂಕಿನ ತಿರುಮಲಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀನುಗಾರರ ಸಹಕಾರ ಸಂಘದಿಂದ ತೊಣ್ಣೂರು ಕೆರೆಗೆ ಸುಮಾರು ಐದು ಲಕ್ಷ ಕಾಟ್ಲಾ ಮೀನು ಮರಿಗಳನ್ನು ಸೋಮವಾರ ಬಿಡಲಾಯಿತು.
ಸಂಘದ ಅಧ್ಯಕ್ಷ ಟಿ.ಎ.ರೂಪೇಶ್ ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀನುಗಾರರ ಸಹಕಾರ ಸಂಘ ಮುಂದಿನ ಐದು ವರ್ಷಗಳ ಕಾಲ ತೊಣ್ಣೂರು ಕೆರೆಯಲ್ಲಿ ಮೀನು ಸಾಕಣೆ ಕಾರ್ಯ ನಿರ್ವಹಿಸಲಿದೆ. ಹೀಗಾಗಿ, ಆರೋಗ್ಯಕ್ಕೆ ಉತ್ತಮ ಆಹಾರವಾಗಿರುವ ಮೀನುಗಳನ್ನು ಕೆರೆಯಲ್ಲಿ ಬಿಡಲಾಗಿದೆ ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಆದಿಶೇಷ, ಕಾರ್ಯದರ್ಶಿ ಎನ್.ಎ.ಧನದಾಸ್ ನಿರ್ದೇಶಕರಾದ ಟಿ.ಎಸ್.ರಾಮಯ್ಯ, ಟಿ.ಬಿ.ರಾಮು, ಚಂದ್ರಿಕಾ, ಶಂಕರ್ ಇತರರು ಇದ್ದರು.