ಕೆರೆಗೆ ರಾಸಾಯನಿಕ ನೀರು ಮಿಶ್ರಣ ಮೀನುಗಳು ಸಾವು

ಕುದರಗುಂಡಿ  ಕೆರೆಯಲ್ಲಿ ರಾಸಾಯಾನಿಕ ಮಿಶ್ರಿತ ನೀರು ಕುಡಿದು ಮೀನುಗಳು ಮೃತಪಟ್ಟಿರುವುದು.
ಕುದರಗುಂಡಿ ಕೆರೆಯಲ್ಲಿ ರಾಸಾಯಾನಿಕ ಮಿಶ್ರಿತ ನೀರು ಕುಡಿದು ಮೀನುಗಳು ಮೃತಪಟ್ಟಿರುವುದು.
Published on
ಮದ್ದೂರು: ತಾಲೂಕಿನ ಕುದರಗುಂಡಿ ಗ್ರಾಮದ ಕೆರೆಗೆ ರಾಸಾಯನಿಕ ಮಿಶ್ರಿತ ನೀರು ಸೇರ್ಪಡೆಯಾಗುತ್ತಿರುವ ಹಿನ್ನೆಲೆ ಸಾವಿರಾರು ಮೀನುಗಳು ಸಾವಿಗೀಡಾಗಿವೆ.
ಗ್ರಾಮದ ಸಮೀಪವೇ ಇರುವ ಮನ್‌ಮುಲ್‌ನಲ್ಲಿ ಹಾಲಿನ ಟ್ಯಾಂಕರನ್ನು ಆ್ಯಸಿಡ್ ಹಾಗೂ ಹಲವು ರಾಸಾಯನಿಕಗಳಿಂದ ಸ್ವಚ್ಛ ಗೊಳಿಸಿದ ನಂತರದ ಆ ನೀರನ್ನು ಕೆರೆಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎಂದು ಕೆರೆಯನು ್ನಗುತ್ತಿಗೆ ಪಡೆದಿರುವ ಕೆ.ಬಿ.ಶಿವಣ್ಣ ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕೆರೆಯನ್ನು ಮೀನು ಸಾಕಣೆಗೆ ಗುತ್ತಿಗೆ ಪಡೆಯುತ್ತಿದ್ದು, ಇತ್ತೀಚೆಗೆ ಸುಮಾರು 9.27 ಲಕ್ಷ ರೂ., ಗುತ್ತಿಗೆ ಪಡೆದು ಮೀನು ಸಾಕಣೆ ಮಾಡುತ್ತಿದ್ದೆ ಎಂದಿರುವ ಅವರು, ಮೀನುಗಳು ಸಾವಿಗೀಡಾದ ಹಿನ್ನೆಲೆಯಲ್ಲಿ ಸುಮಾರು 40 ಲಕ್ಷ ರೂ.ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಕೆರೆಯ ನೀರನ್ನು ಪರೀಕ್ಷೆ ಒಳಪಡಿಸಿದ ಹಿನ್ನೆಲೆ ಆಮ್ಲಜನಕ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಮೀನುಗಳು ಸಾವಿಗೀಡಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆಯ ನೀರನ್ನು ಬಳಕೆ ಮಾಡದಂತೆ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಮೀನುಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಕೆರೆಯನ್ನು ಗುತ್ತಿಗೆ ಪಡೆದಿರುವ ಶಿವಣ್ಣ ಒತ್ತಾಯಿಸಿ ದ್ದಾರೆ.
ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಘು ಅವರು, ಮನ್‌ಮುಲ್‌ನಿಂದ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ನೀರು ನಾಲೆಯ ಮುಖಾಂತರ ಕೆರೆಗೆ ಹರಿದುಹೋಗಿಲ್ಲ ಎಂದು ವಿಜಯವಾಣಿ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net