ಮೂಲಸೌಕರ್ಯಕ್ಕೆ ಮೊದಲ ಆದ್ಯತೆ

ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಸೋಮವಾರ ಶಾಸಕ ಎಚ್.ಟಿ.ಮಂಜು ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಅಭಿವೃದ್ಧಿ ಕಾಮಗಾರಿ ಸಮಾರಂಭಕ್ಕೆ ಚಾಲನೆ ನೀಡಿದರು. ಎಸ್.ಕೆ.ಬಾಲಕೃಷ್ಣ, ಸರ್ವೆಯರ್ ಪುಟ್ಟೇಗೌಡ, ಕೃಷ್ಣೇಗೌಡ, ಶೇಖರ್ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಸೋಮವಾರ ಶಾಸಕ ಎಚ್.ಟಿ.ಮಂಜು ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಅಭಿವೃದ್ಧಿ ಕಾಮಗಾರಿ ಸಮಾರಂಭಕ್ಕೆ ಚಾಲನೆ ನೀಡಿದರು. ಎಸ್.ಕೆ.ಬಾಲಕೃಷ್ಣ, ಸರ್ವೆಯರ್ ಪುಟ್ಟೇಗೌಡ, ಕೃಷ್ಣೇಗೌಡ, ಶೇಖರ್ ಮತ್ತಿತರರಿದ್ದರು.
Published on
ಕಿಕ್ಕೇರಿ: ಎಲ್ಲರಿಗೂ ಅಗತ್ಯವಾಗಿ ಬೇಕಿರುವ ಶುದ್ಧ ನೀರು, ರಸ್ತೆ ಸಂಪರ್ಕಕ್ಕಾಗಿ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಿರ್ಮಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ರಸೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡುತ್ತ, ನಮ್ಮ ತಾಲೂಕು ಇಡೀ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭೌಗೋಳಿಕವಾಗಿ ವಿಸ್ತಾರ ಹೊಂದಿದೆ. ಆದರೆ ಸರ್ಕಾರದಿಂದ ಅನುದಾನ ಮಾತ್ರ ಅತ್ಯಲ್ಪವಾಗಿದೆ ಎಂದರು.
ಹೋಬಳಿಯ ಮಾದಿಹಳ್ಳಿ ಹಾಗೂ ಗೊಂದಿಹಳ್ಳಿ ಸೇತುವೆ ಪುನರ್ ನಿರ್ಮಾಣ ಮತ್ತಿತರ ಯೋಜನೆಗಳಿಗೆ ಬಿಜೆಪಿ ಸರ್ಕಾರ ಇದ್ದಾಗ 35 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಅನುದಾನವನ್ನು ವಾಪಸ್ ಪಡೆದಿದೆ. ಅಧಿಕಾರಿಗಳ ಮನವೊಲಿಸಿ ಇದರಲ್ಲಿ ಅಲ್ಪಸ್ವಲ್ಪ ಹಣವನ್ನು ಬಿಡುಗಡೆ ಮಾಡಿಸಿ ಅಗತ್ಯ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ನೀಡಿದರೆ, ನನಗೆ 5 ಕೋಟಿ ರೂ. ನೀಡಿದೆ. ತಾಲೂಕಿನ ರಸ್ತೆಗಳು ಗುಂಡಿ ಬಿದ್ದಿವೆ. ಮತದಾರರು ಶಾಪ ಹಾಕುತ್ತಿದ್ದಾರೆ. ಕನಿಷ್ಠ 100 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದರೆ ನೆಮ್ಮದಿಯಿಂದ ಹಳ್ಳಿಗಾಡಿನ ಜನತೆ ಓಡಾಡಬಹುದಾಗಿದೆ ಎಂದು ಹೇಳಿದರು.
ಸಮೀಪದ ಶ್ರವಣೂರು, ಚಿಕ್ಕಮಂದಗರೆ, ಗದ್ದೆಹೊಸೂರು, ಮೂಡನಹಳ್ಳಿ, ಆಲೇನಹಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದೇ ವೇಳೆ ಭೂಮಿಪೂಜೆ ನೆರವೇರಿಸಿದರು,
ಗ್ರಾಪಂ ಸದಸ್ಯ ಎಸ್.ಕೆ.ಬಾಲಕೃಷ್ಣ, ಜೆಡಿಎಸ್ ಮುಖಂಡ ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ನಿವೃತ್ತ ಸರ್ವೇ ಅಧಿಕಾರಿ ಪುಟ್ಟೇಗೌಡ, ಕೃಷ್ಣೇಗೌಡ, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತ್‌ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net