ಶ್ರೀರಂಗಪಟ್ಟಣ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಇಡೀ ಮನೆಯೇ ಸುಟ್ಟು ಕರಕಲಾಗಿದೆ.
ಗ್ರಾಮದ ಹಳೇ ಕೆನರಾ ಬ್ಯಾಂಕ್ ಬೀದಿಯ ನಿವಾಸಿ ಪುಟ್ಟೇಗೌಡ ಅವರ ಮನೆ ಭಸ್ಮವಾಗಿದೆ. ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಬಟ್ಟೆ, ಪಾತ್ರೆಗಳು, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಧಾನ್ಯ, ನಗದು ಸೇರಿದಂತೆ ಸಂಪೂರ್ಣ ಭಸ್ಮವಾಗಿದೆ.
ಘಟನೆ ನಡೆದ ವೇಳೆ ಮನೆಯೊಳಗೆ ಯಾರೂ ಇಲ್ಲಲಿಲ್ಲ. ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಲು ಯತ್ನಿಸಿದರು. ತಕ್ಷಣ ಅಗ್ನೀಶಾಮಕ ಸಿಬ್ಬಂದಿ ಧಾವಿಸಿ 3 ತಾಸು ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಶನಿವಾರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು, ತಹಸೀಲ್ದಾರ್ ಚೇತನಾ ಯಾದವ್, ಆರ್‌ಐ ಪುಟ್ಟಸ್ವಾಮಿ ಮತ್ತು ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದರು. ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ಹೇಳಿದರು. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.