ಪಾಂಡವಪುರ ಬಂದ್‌ಗೆ ರೈತ ಸಂಘ ಕರೆ

ಪಾಂಡವಪುರ ಬಂದ್‌
ಪಾಂಡವಪುರ ಬಂದ್‌
Published on

ಪಾಂಡವಪುರ: ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ನೀಡಿರುವ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಆ.13ರಂದು ಪಾಂಡವಪುರ ಬಂದ್‌ಗೆ ಕರೆ ನೀಡಿದೆ.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರು ತಮಿಳುನಾಡಿಗೆ ಹರಿದರೆ ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ಎದುರಾಗುತ್ತದೆ. ಪ್ರಾಧಿಕಾರದ ಆದೇಶದ ವಿರುದ್ಧದ ಹೋರಾಟಕ್ಕೆ ರೈತರು, ವ್ಯಾಪಾರಸ್ಥರು, ಅಂಗಡಿ ಮಾಲೀಕರು ಸೇರಿದಂತೆ ಎಲ್ಲ ನಾಗರಿಕರು ಸಹಕಾರ ನೀಡಬೇಕು. ಹೀಗಾಗಿ ಗುರುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಕರೆಗೆ ಸಹಕಾರ ನೀಡಬೇಕು ಎಂದು ರೈತ ಸಂಘ ಪ್ರಕಟಣೆಯಲ್ಲಿ ಕೋರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net