ಗ್ರಾಮದ ಸಿದ್ದಯ್ಯ(56) ಮೃತರು. ಇವರು ಜ.3 ರಂದು ಹುಲ್ಲಿನಹೊರೆಯನ್ನು ತಲೆಯ ಮೇಲೆ ಹೊತ್ತು ಪೂರಿಗಾಲಿ ಮುಖ್ಯರಸ್ತೆ ಬದಿಯಲ್ಲಿ ಮನೆಕಡೆಗೆ ಹೋಗುತ್ತಿದ್ದರು. ಈ ವೇಳೆ ಬಿ.ಜಿ.ಪುರ ಕಡೆಯಿಂದ ಗೂಡ್ಸ್ ಆಟೋವೊಂದು ಉರುಳಿ ಸೊಪ್ಪು ತುಂಬಿಸಿಕೊಂಡು ತೆರಳುತ್ತಿದ್ದು, ಆಟೋ ಹಿಂಭಾಗ ಬಿಗಿದಿದ್ದ ಹಗ್ಗ ಸಡಿಲಗೊಂಡು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಸಿದ್ದಯ್ಯ ಅವರ ಕಾಲಿಗೆ ಸುತ್ತಿಕೊಂಡು ಸಾಕಷ್ಟು ದೂರ ಎಳೆದೊಯ್ದಿತ್ತು. ಇದನ್ನು ಗಮನಿಸದ ಚಾಲಕ ಆಟೋ ಚಾಲನೆ ಮಾಡಿಕೊಂಡು ಸುಮಾರು ಅರ್ಧ ಕಿ.ಮೀಟರ್ ದೂರ ಸಾಗಿದ್ದರಿಂದ ಸಿದ್ದಯ್ಯ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.