ಅನಾರೋಗ್ಯ ಪೀಡಿತನನ್ನು ಬಿಟ್ಟುಹೋದ ಕುಟುಂಬಸ್ಥರು

ತಾಲೂಕಿನ ಪಂಪ್ ಹೌಸ್ ಬಳಿಯ ರಸ್ತೆ ಬದಿಯಲ್ಲಿ ಬಿದ್ದಿದ್ದ ನಟರಾಜು ಎಂಬಾತನನ್ನು ಪಾಲಹಳ್ಳಿಯ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹಾಗೂ ಯೋಗಿಶ್ ಸಂತೈಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಆತನನ್ನು ಸಾಗಿಸಿದರು.
ತಾಲೂಕಿನ ಪಂಪ್ ಹೌಸ್ ಬಳಿಯ ರಸ್ತೆ ಬದಿಯಲ್ಲಿ ಬಿದ್ದಿದ್ದ ನಟರಾಜು ಎಂಬಾತನನ್ನು ಪಾಲಹಳ್ಳಿಯ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹಾಗೂ ಯೋಗಿಶ್ ಸಂತೈಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಆತನನ್ನು ಸಾಗಿಸಿದರು.
Published on
ಶ್ರೀರಂಗಪಟ್ಟಣ: ತಾಲೂಕಿನ ಪಂಪ್ ಹೌಸ್ ಸಮೀಪ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಆತನ ಸಂಬಂಧಿಕರು ರಸ್ತೆಯಲ್ಲೇ ಬಿಟ್ಟುಹೋಗಿ ಅಮಾನವೀಯತೆ ಮೆರೆದಿರುವ ಘಟನೆ ತಡವಾಗಿ ತಿಳಿದುಬಂದಿದೆ.
ಹಾಸನ ಜಿಲ್ಲೆ ಮೂಲದ ನಟರಾಜು ಎಂಬಾತ ತನ್ನ ಕುಟುಂಬ ಸದಸ್ಯರಿಂದಲೇ ನಿರ್ಲಕ್ಯಕ್ಕೆ ಒಳಗಾಗಿ ಇದೀಗ ಬೀದಿ ಪಾಲಾಗಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ತಾಲೂಕಿನ ಪಂಪ್‌ಹೌಸ್ ಸಮೀಪದ ರಸ್ತೆ ಬಳಿ ಸೋಮವಾರ ಕರೆತಂದ ಕುಟುಂಬಸ್ಥರು ರಸ್ತೆ ಮಧ್ಯೆಯೇ ಮಲಗಿಸಿ ಹೊರಟು ಹೋಗಿದ್ದಾರೆ.
ರಸ್ತೆಮಧ್ಯೆ ಮಲಗಿದ್ದ ಈತನನ್ನು ಗಮನಿಸಿದ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹಾಗೂ ಯೋಗೀಶ್ ಸೇರಿದಂತೆ ಇತರ ಸ್ಥಳಿಯರು ನೀರು, ಆಹಾರ ನೀಡಿ ಸಂತೈಸಿ ಬಳಿಕ ವಿಚಾರಿಸಿದ್ದಾರೆ. ಅವರ ಅಕ್ಕನ ಮಕ್ಕಳು ಮೈಸೂರಿನ ಬೆಲವತ್ತ ಗ್ರಾಮದಲ್ಲಿರುವುದು ಹಾಗೂ ಅವರ ಪುತ್ರಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವುದು ತಿಳಿದುಬಂದಿದೆ.
ಇದೀಗ ಅವರನ್ನು ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ನಿರಾಶ್ರಿತ ನಟರಾಜು ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net