ಸಂಜೆ 5ರಿಂದ 7.30ರವರೆಗೆ ವೀರಗಾಸೆ, ವಾದ್ಯ ಮೆರವಣಿಗೆ ಮೂಲಕ ಮೀಸಲು ನೀರು ತರಲಾಗುವುದು. ತರಿಕೆರೆ ಗ್ರಾಮಸ್ಥರಿಂದ ಕರಿಯಣ್ಣ, ಕೆಂಚಣ್ಣ ದೇವರುಗಳು ಮಣಿಸೇವೆ ನಡೆಯಲಿದೆ. ರಾತ್ರಿ 7.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿನಾಯಕ ಗೆಳೆಯರ ಬಳಗದಿಂದ ಸಿನಿ ಮ್ಯೂಸಿಕ್, ಶ್ರೀಕಾಂತ ತಂಡದಿಂದ ಸುಗಮ ಸಂಗೀತ ಮತ್ತು ಭಕ್ತಿಗೀತೆ, ಸರಿಗಮಪ ಖ್ಯಾತಿಯ ಜ್ಞಾನ ಗುರುರಾಜ್ ಅವರಿಂದ ಸುಗಮ ಸಂಗೀತ, ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ, ಬಿ.ಪಿ.ಗೌತಮಿ ಅವರಿಂದ ಭರತನಾಟ್ಯ, ವಿದ್ವಾನ್ ಸತೀಶ್‌ಕುಮಾರ್ ತಾಂಡವಮೂರ್ತಿ ತಂಡದಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಶಾಸಕ ರವಿಕುಮಾರ್ ಗಣಿಗ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕಿರುತೆರೆ ನಟ ಕಿರಣ್‌ರಾಜ್ ಹಾಗೂ ನಿವೃತ್ತ ಸೈನಿಕ ಯೋಗೇಶ್ ಅವರನ್ನು ಅಭಿನಂದಿಸಲಾಗುವುದು ಎಂದು ವಿವರಿಸಿದರು.