ಮಂಡ್ಯ ಜಿಲ್ಲೆಯಲ್ಲಿ ಶೇ. 70 ರಷ್ಟು ಕೃಷಿ ಕ್ಷೇತ್ರದಲ್ಲಿದ್ದು, ಐದು ಲಕ್ಷ ಜನರು ಕೃಷಿರಂಗ ಅವಲಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ಅತಿ ಸಣ್ಣ, ಸಣ್ಣ ರೈತರ ಸಂಖ್ಯೆ ಶೇ. 96 ರಷ್ಟಿದೆ. ಒಟ್ಟಾರೆ ನೀರಾವರಿ ಸೌಲಭ್ಯ ಶೇ. 65, ನಾಲೆ ಮೂಲಕ ನೀರಾವರಿಯು ಶೇ.47 ರಷ್ಟಿದ್ದು, ಬೋರ್‌ವೆಲ್‌ಗಳ ಬಳಕೆ ಶೇ. 41.ರಷ್ಟರಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅದರಲ್ಲೂ ತಾಲೂಕಿನಲ್ಲಿ ಸುಮಾರು ಶೇ.71.33 ರಷ್ಟು ಬೋರ್‌ವೆಲ್‌ಗಳಿಂದ 5015 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಅವಲಂಬಿತರಾಗಿದ್ದು, ಕೊಳವೆ ಬಾವಿ ಕೊರೆಯಿಸಿ ಮೋಟರ್ ಅಳವಡಿಸಿ ಬೆಳೆ ಬೆಳೆದಿದ್ದಾರೆ. ಆದರೆ ರಾಜ್ಯ ಸರ್ಕಾರದ ಆದೇಶದಂತೆ ನೋಂದಣಿಯಾಗದ ಪಂಪ್‌ಸೆಟ್‌ಗಳ ನೋಂದಣಿ ಮಾಡಿಸಲು ಸರ್ಕಾರಕ್ಕೆ 23,500 ರೂ. ಹಾಗೂ ಕಂಟ್ರಾಕ್ಟರ್‌ಗೆ ಸಿಆರ್ ಮತ್ತು ಅಗ್ರಿಮೆಂಟ್ ನೀಡಲು 3,500 ರೂ. ಸೇರಿ 27 ಸಾವಿರ ರೂ.ಗಳನ್ನ ವಸೂಲಿ ಮಾಡುತ್ತಾ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.