ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಿ

ರಕ್ತದಾನ ಮಾಡಲು ಮಂಡ್ಯದಿಂದ ಬೆಂಗಳೂರಿಗೆ ಬೈಕ್ ಜಾಥಾದ ಮೂಲಕ ತೆರಳುತ್ತಿದ್ದ ಜೀವಧಾರೆ ಟ್ರಸ್ಟ್ ಪದಾಧಿಕಾರಿಗಳನ್ನು ಮದ್ದೂರು ನಗರದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಸ್ವಾಗತಿಸಲಾಯಿತು. ಎಸ್.ನಾಗೇಶ್, ಸುರೇಶ್, ನಾಗಮ್, ಪ್ರವೀಣ್, ಅನಿಜಿತ್ ಸೇರಿದಂತೆ ಇತರರು ಇದ್ದರು.

Published on

ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ನಾಗೇಶ್ ಮನವಿ

ಜಗತ್ತಿನಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೆ ಯಾವುದು ಇಲ್ಲದ ಕಾರಣ ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಬೇಕೆಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ನಾಗೇಶ್ ಮನವಿ ಮಾಡಿದರು.

ವೀರ ಸೇನಾನಿಗಳ ಸ್ಮರಣಾರ್ಥ, ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ದಿನದ ಅಂಗವಾಗಿ ಭಾನುವಾರ ಕೆಂಗೇರಿ ವಿಶ್ವ ಒಕ್ಕಲಿಗರ ಮಠದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಮಂಡ್ಯದಿಂದ ಬೈಕ್ ಜಾಥಾದ ಮೂಲಕ ಹೋಗುತ್ತಿದ್ದ ಜೀವಧಾರೆ ಟ್ರಸ್ಟ್ ಪದಾಧಿಕಾರಿಗಳನ್ನು ಮಾರ್ಗಮಧ್ಯೆ ನಗರದ ಪೇಟೆಬೀದಿಯಲ್ಲಿ ಪುಷ್ಪವೃಷ್ಟಿಗೈದು ಅಭಿನಂದಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ರಕ್ತಕ್ಕೆ ಹೆಚ್ಚಿನ ಮಹತ್ವವಿರುವುದರಿಂದ ರಕ್ತದಾನ ಮಾಡಿ ಬೆಂಗಳೂರಿಗೆ ತೆರಳುತ್ತಿರುವ ಜೀವಧಾರೆ ಟ್ರಸ್ಟ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಸಂಘಟನೆ ತಾಲೂಕು ಮಾಜಿ ಅಧ್ಯಕ್ಷ ಸುರೇಶ್, ಮಹಿಳಾ ಅಧ್ಯಕ್ಷೆ ನಾಗಮ್ಮ, ಪ್ರಾಂಶುಪಾಲ ಪ್ರವೀಣ್, ಮುಖಂಡ ಅನಿಜಿತ್ ಹಾಗೂ ಜೀವಧಾರೆ ಟ್ರಸ್ಟ್ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net