ಮೈಭಾರತ್ ಕೇಂದ್ರ, ಅನನ್ಯ ಆರ್ಟ್ ಸಂಸ್ಥೆ, ಕೆಪಿಎಸ್ ಯೂತ್ ಕ್ಲಬ್, ಎನ್‌ಎಸ್‌ಎಸ್ ಘಟಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜನೆ
ಮಂಡ್ಯ: ಪರಿಸರ ಸಂರಕ್ಷಣೆ ಎಂಬುದು ಸಮಾಜ ಸೇವೆಯಲ್ಲ. ಅದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಆಗಬೇಕು ಎಂಬುದು ಬರಬೇಕು ಎಂದು ಡಿವೈಎಸ್‌ಪಿ ಶಿವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಶತಮಾನೋತ್ಸವ ಶಾಲೆಯ ಆವರಣದಲ್ಲಿ ಮೈಭಾರತ್ ಕೇಂದ್ರ, ಅನನ್ಯ ಆರ್ಟ್ ಸಂಸ್ಥೆ, ಕೆಪಿಎಸ್ ಯೂತ್ ಕ್ಲಬ್, ಎನ್‌ಎಸ್‌ಎಸ್ ಘಟಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ಜೀವಿಗೂ ಪರಿಸರದ ಮೇಲೆ ಹಕ್ಕಿದೆ. ಮರಗಳನ್ನು ಸಂರಕ್ಷಣೆ ಮಾಡಬೇಕು. ಪ್ರಾಣಿ ಮತ್ತು ಸಸ್ಯ ಸಂಕುಲ ಹಾಗೂ ಮನುಷ್ಯ ಸಂಕುಲ ಉಳಿವಿಗೆ ಪರಿಸರ ಮುಖ್ಯವಾಗಿದೆ. ಕಾಡು ಬೆಳೆಸಿ ನಾಡು ಉಳಿಸಿ ಎಂಬುವ ನಾಣ್ಣುಡಿಯಂತೆ ಎಲ್ಲರೂ ಪರಿಸರ ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ರಾಘವೇಂದ್ರ ಕಠಾರಿ, ಮೇರಾ ಯುವ ಭಾರತ್‌ನ ಎಸ್.ಶ್ರುತಿ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಂತರಾಜು, ಉಪ ಪ್ರಾಂಶುಪಾಲೆ ಮಾಲತಿ, ಅನನ್ಯ ಆರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಸಹ ಶಿಕ್ಷಕಿ ಜ್ಯೋತಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಉಷಾರಾಣಿ ಇತರರಿದ್ದರು.