ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ

 ಕೆ. ಸಿ.ಮಹೇಶ್ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸ್ನೇಹಿತರು, ಸಹವರ್ತಿಗಳು ಸನ್ಮಾನಿಸಿದರು.
ಕೆ. ಸಿ.ಮಹೇಶ್ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸ್ನೇಹಿತರು, ಸಹವರ್ತಿಗಳು ಸನ್ಮಾನಿಸಿದರು.
Published on
ಹಲಗೂರು: ಸರ್ಕಾರಿ ಶಾಲೆಗಳಿಗೆ ಗ್ರಾಮಸ್ಥರು ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗುವಂತೆ ನಿವೃತ್ತ ಶಿಕ್ಷಕ ಕೆ.ಸಿ.ಮಹೇಶ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕರಲಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿ.ಮಹೇಶ್ ಅವರು ನಿವೃತ್ತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸ್ನೇಹಿತರು, ಸಹವರ್ತಿಗಳು, ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಕೆಲಸ ಎಂದ ಮೇಲೆ ವರ್ಗಾವಣೆ ಆಗುವುದು ನಿವೃತ್ತಿ ಆಗುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿರುವುದು ನನಗೆ ಸಂತಸ ತಂದಿದೆ. ನನ್ನ ಸೇವೆಗೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕ ಕೆ.ಸಿ.ಮಹೇಶ್ ಅವರ ಅಕ್ಕನ ಮಕ್ಕಳಾದ ಪುನೀತ್ ಮತ್ತು ವಿನಯ್ ಜಾಮಿಟ್ರಿ ಬಾಕ್ಸ್, ನೋಟ್ ಪುಸ್ತಕ, ಪೆನ್ನು ವಿತರಿಸಿದರು.
ಮಾಲಿನಿ ಮಹೇಶ್, ನಿವೃತ್ತ ಶಿಕ್ಷಕರಾದ ಬೋರೇಗೌಡ, ಕೃಷ್ಣೇಗೌಡ, ಸುಂದರಪ್ಪ ಮತ್ತು ಜಿ.ಎಸ್. ಕೃಷ್ಣ, ಬಸವರಾಜು, ಕುಟುಂಬದವರಾದ ಗಂಗಾಧರ ಸ್ವಾಮಿ, ಸ್ನೇಹಿತರಾದ ಮಹೇಶ್, ನಾಗೇಂದ್ರ ಪ್ರಕಾಶ, ಅಭಿ, ಜಯಣ್ಣ, ರವೀಶ, ಕುಮಾರ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net