ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಸಿಬ್ಬಂದಿ

ಹಲಗೂರಿನ ರಾಷ್ಟ್ರೀಯ ಹೆದ್ದರಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಹಲಗೂರಿನ ರಾಷ್ಟ್ರೀಯ ಹೆದ್ದರಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
Published on
ಹಲಗೂರು: ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಬಂದ ಒಂದು ಗಂಡು, ಒಂದು ಹೆಣ್ಣು ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಕಾಡಿನತ್ತ ಹಿಮ್ಮೆಟ್ಟಿಸಿದರು.
ಬುಧವಾರ ತಡ ರಾತ್ರಿ ಭೀಮನ ಕಿಂಡಿ ಅರಣ್ಯ ಪ್ರದೇಶದಿಂದ ಹೊರಬಂದ ಕಾಡಾನೆಗಳು ಎಚ್.ಬಸಾಪುರ ಹಾಗೂ ಹಲಗೂರು ಹೊರ ವಲಯದಲ್ಲಿರುವ ಅರಣ್ಯ ಇಲಾಖೆ ಕಚೇರಿಯ ಹಿಂಭಾಗ ಇರುವ ಹಳ್ಳದಲ್ಲಿ ತಂಗಿದ್ದವು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಡ್ರೋನ್ ಕ್ಯಾಮರಾ ನೆರವಿನಿಂದ ಆನೆಗಳ ಚಲನವಲನ ಗಮನಿಸಿದರು. ಗುರುವಾರ ಸಂಜೆವರೆಗೂ ಅರಣ್ಯ ಹೊರ ವಲಯದಲ್ಲೇ ತಂಗಿದ್ದ ಕಾಡಾನೆಗಳನ್ನು ಬಳಿಕ ಸಿಬ್ಬಂದಿ ಸಿಡಿಮದ್ದುಗಳನ್ನು ಸಿಡುಸುತ್ತಾ ಕಾಡಿಗೆ ಅಟ್ಟಿದರು. ಕಾಡಾನೆಗಳು ಹಲಗೂರು ಬಸವನ ಬೆಟ್ಟ ವನ್ಯಜೀವಿ ವಲಯಕ್ಕೆ ತೆರಳಿದವು.
ಎಸಿಎಫ್ ನಾಗೇಂದ್ರಪ್ರಸಾದ್, ಡಿಸಿಎಫ್ ಸುರೇಂದ್ರ ಅವರ ಸಲಹೆ ಮೇರೆಗೆ ಹಲಗೂರು ವನ್ಯಜೀವಿ ವಲಯದ ಆರ್‌ಎಫ್‌ಒ ಪ್ರಮೋದ್ ಕುಮಾರ್, ಆರ್‌ಎಫ್‌ಒ ಅನಿಲ್ ಕುಮಾರ್, ಮಳವಳ್ಳಿ ಪ್ರಾದೇಶಿಕ ವಲಯದ ಆರ್‌ಎಫ್‌ಒ ಗವಿಯಪ್ಪ, ಹಲಗೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಲೋಕೇಶ್, ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net