ಹಲಗೂರು: ಸಮೀಪದ ಧನಗೂರು ಗ್ರಾಮದಲ್ಲಿ ಮುಸ್ಲಿಮರು ಸಂಭ್ರಮ-ಸಡಗರದಿಂದ ಈದ್- ಉಲ್-ಫಿತ್ರ್ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಸೋಮವಾರ ಆಚರಿಸಿದರು.
ಧರ್ಮ ಗುರುಗಳಾದ ಮೌಲನಾ ಅಬ್ದುಲ್ ಮುಸಲ್ವೀರ್ ಹಬ್ಬದ ಸಂದೇಶ ಸಾರಿದರು. ರಂಜಾನ್ ಮಾಸದಲ್ಲಿ ಇಸ್ಲಾಂ ಧರ್ಮದಲ್ಲಿನ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಬಡ ಜನರಿಗೆ ಕೈಲಾದಷ್ಟು ದಾನ ಮಾಡಿ ಎಂದು ಸಲಹೆ ನೀಡಿದರು. ಮನುಷ್ಯ ಜೀವನದಲ್ಲಿ ನೋವು ನಲಿವುಗಳನ್ನು ಹಂಚಿಕೊಂಡು ಸಮಾಜದಲ್ಲಿ ಎಲ್ಲ ಧರ್ಮದ ಜನರು ಸೌಹಾರ್ದತೆಯಿಂದ ಬಾಳ್ವೆ ನಡೆಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷರಾದ ರಿಜ್ವಾನ್ ಅಬ್ದುಲ್ ಮುಹೀಬ್, ಉಪಾಧ್ಯಕ್ಷ ಸಯ್ಯದ್ ಅಲ್ಲಾ ಬಕಾಷ್, ದೌಲತ್ ಪಾಷಾ, ಸಾಧಿಕ್ ಪಾಷಾ, ಇಲಿಯಾಜ್ ಪಾಷಾ, ಪಾರೂಕ್ ಪಾಷಾ ಇತರರು ಇದ್ದರು.