ಮಳವಳ್ಳಿ: ರಂಗಬಂಡಿ ಮಳವಳ್ಳಿ ಹಾಗೂ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಾ. 27 ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಸಂತೋತ್ಸವ ಶೀರ್ಷಿಕೆಯಡಿ ನಾಟಕೋತ್ಸವ ನಡೆಯಲಿವೆ.
ಮೂರು ವರ್ಷಗಳಿಂದ ಸುಂದರಮ್ಮ ನಾಟಕೋತ್ಸವ, ಕುವೆಂಪು ನಾಟಕೋತ್ಸವ, ಮಕ್ಕಳ ನಾಟಕೋತ್ಸವ ನಡೆದಿದ್ದು, ಪ್ರಸ್ತುತ ವಸಂತೋತ್ಸವ ಶೀರ್ಷಿಕೆಯಡಿ ನಾಟಕೋತ್ಸವ ಆಯೋಜಿಸಲಾಗಿದೆ. ರಾಜ್ಯ ನಾಟಕ ಅಕಾಡೆಮಿ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾ.27ರಂದು ಗಮ್ಯ ಶ್ರೀರಂಗಪಟ್ಟಣ ಕಲಾವಿದರ ಕಲಾವಿದರ ತಂಡದಿಂದ ಉರಿ ಕಂಡಾಯ ನಾಟಕ ಪ್ರದರ್ಶನವಿದ್ದು, ಹೆಚ್ಚಿನ ಸಂಖೆಯಲ್ಲಿ ಜನರು ನಾಟಕೋತ್ಸವದಲ್ಲಿ ಭಾಗಿಯಾಗಿ ರಂಗ ಕಲೆಯನ್ನು ಬೆಂಬಲಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.