ಚಿತ್ರರಂಗವನ್ನುಳಿಸಲು ಗಂಭೀರ ಚಿಂತನೆಯಾಗಲಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಒತ್ತಾಯ

ಮಂಡ್ಯ ನಗರದ ಉಪ ಕಾರಾಗೃಹ ವೃತ್ತದ ಸಮೀಪ ಇರುವ ಅಪ್ಪು ಬಿರಿಯಾನಿ ಸೆಂಟರ್ ಬಳಿ ಡಾ.ಪುನೀತ್‌ರಾಜಕುಮಾರ್ ಜನ್ಮದಿನ ಆಚರಿಸಲಾಯಿತು.
ಮಂಡ್ಯ ನಗರದ ಉಪ ಕಾರಾಗೃಹ ವೃತ್ತದ ಸಮೀಪ ಇರುವ ಅಪ್ಪು ಬಿರಿಯಾನಿ ಸೆಂಟರ್ ಬಳಿ ಡಾ.ಪುನೀತ್‌ರಾಜಕುಮಾರ್ ಜನ್ಮದಿನ ಆಚರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪು ಬಿರಿಯಾನಿ ಸೆಂಟರ್ ಆಚರಣೆ
  • ಡಾ.ಪುನೀತ್‌ರಾಜಕುಮಾರ್ ಅಭಿಮಾನಿಗಳಿಂದ ಆಯೋಜನೆ
ಮಂಡ್ಯ: ಪ್ರೇಕ್ಷಕರ ನಿರಾಸಕ್ತಿ ಮತ್ತು ಕೊರತೆಯಿಂದ ವಿನಾಶದತ್ತ ಮುಖ ಮಾಡಿರುವ ಕನ್ನಡ ಚಿತ್ರರಂಗದ ಉಳಿವಿಗೆ ಸರ್ಕಾರ ಹಾಗೂ ಚಿತ್ರೋದ್ಯಮ ಗಂಭೀರ ಚಿಂತನೆ ನಡೆಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ನಗರದ ಉಪ ಕಾರಾಗೃಹ ವೃತ್ತದ ಸಮೀಪ ಇರುವ ಅಪ್ಪು ಬಿರಿಯಾನಿ ಸೆಂಟರ್ ಬಳಿ ಡಾ.ಪುನೀತ್‌ರಾಜಕುಮಾರ್ ಅಭಿಮಾನಿಗಳು ಆಯೋಜಿಸಿದ್ದ ಅಪ್ಪು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದರ ಏರಿಕೆ, ವಿಭಿನ್ನ ಮನೋರಂಜನೆ, ಸಮಯದ ಅಭಾವ, ಕೆಲಸದ ಒತ್ತಡ, ಮೊಬೈಲ್ ಬಳಕೆಯಂತಹ ಹತ್ತಾರು ಕಾರಣದಿಂದ ಚಿತ್ರರಂಗ ಕಳೆಗುಂದಿದ್ದು, ಭವಿಷ್ಯದಲ್ಲಿ ಜನರ ಅಭಿರುಚಿಗೆ ಪೂರಕವಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರರಂಗವನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದು ಹೇಳಿದರು.
ಸದಭಿರುಚಿ ಚಿತ್ರದ ಮೂಲಕ ಅಸಂಖ್ಯಾತ ಪ್ರೇಕ್ಷಕ ವೃಂದವನ್ನು ಹೊಂದಿದ್ದಂತಹ ಪುನೀತ್ ರಾಜಕುಮಾರ್ ಉತ್ತಮ ಕಥೆಗಳ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದ್ದರು. ಅಂತಹ ಚಿತ್ರಗಳು ಇಂದಿಗೂ ಪ್ರಸ್ತುತ. ನಿಜ ಜೀವನದಲ್ಲಿ ಜನಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ಯುವಜನರ ಆದರ್ಶವೇ ಆಗಿದ್ದಾರೆ. ಅಪ್ಪು ಬಿರಿಯಾನಿ ಸೆಂಟರ್‌ನ ಮಾಲೀಕ ಕೆ.ಎಸ್. ಗುರುರಾಜ್ ಪ್ರತಿ ವರ್ಷ ಸಮಾಜಸೇವೆ ಮೂಲಕ ಪುನೀತ್ ಜನ್ಮದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಅಪ್ಪು ಅಭಿಮಾನಿ ಬಳಗದ ಕೆ.ಎಸ್.ಗುರುರಾಜ್, ಮುಖಂಡರಾದ ಎಂ.ಕೃಷ್ಣ, ಪ್ರದೀಪ್ ಯಲಿಯೂರು, ಶಿವಕುಮಾರ್ ಸಂತೆಕಸಲಗೆರೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net