ಬಾಬಾ ಸಾಹೇಬ್ ಪುತ್ಥಳಿಗೆ ಮಾಲಾರ್ಪಣೆ

ಮದ್ದೂರು ನಗರದ ನಗರಸಭೆ  ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ವಿ.ಸಿ.ಉಮಾಶಂಕರ್, ಉಮೇಶ್, ವಿಶ್ವಾಸ್, ಗಗನಗೌಡ, ರಮೇಶ, ನವೀನ್, ವರದರಾಜು ಇದ್ದರು.
ಮದ್ದೂರು ನಗರದ ನಗರಸಭೆ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ವಿ.ಸಿ.ಉಮಾಶಂಕರ್, ಉಮೇಶ್, ವಿಶ್ವಾಸ್, ಗಗನಗೌಡ, ರಮೇಶ, ನವೀನ್, ವರದರಾಜು ಇದ್ದರು.
Published on
ಮದ್ದೂರು: ಶಿಕ್ಷಣವೇ ಶಕ್ತಿ ಎಂಬುದನ್ನು ಸಾಧಿಸಿ ತೋರಿಸಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಬಣ್ಣಿಸಿದರು.
ನಗರದ ನಗರಸಭಾ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿಯೇ ಅತಿ ಹೆಚ್ಚು ಪದವಿಗಳನ್ನು ಪಡೆದ ಜ್ಞಾನ ದೀವಿಗೆ ಅಂಬೇಡ್ಕರ್. ಅವರು ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸಬೇಕಾದರೆ ಶಿಕ್ಷಣವೆಂಬ ಅಸ್ತ್ರದಿಂದ ಸಾಧ್ಯಎಂಬ ಸತ್ಯವನ್ನು ತೋರಿಸಿಕೊಟ್ಟವರು. ಧರ್ಮವೆಂದರೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳನ್ನು ಕಲಿಸುತ್ತದೆಯಲ್ಲ ಅದೇ ನಿಜವಾದ ಧರ್ಮ ಎಂದವರು ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಸೊಂಪುರ ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಕಾರ್ಯದರ್ಶಿ ಗಗನಗೌಡ, ಟೈಲರ್ ರಮೇಶ, ಮುಖಂಡರಾದ ನವೀನ್, ವರದರಾಜು, ಕುಮಾರ್, ಜಗದೀಶ್, ಲೋಕಿ, ಕಲಾವಿದರಾದ ರಾಮು, ಲವ, ಮಹದೇವು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net