ದೊಡ್ಡಬೂಹಳ್ಳಿ ಶಾಲಾ ಅಣಕು ಸಂಸತ್ ಚುನಾವಣೆ

ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನವಾಣೆಯಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕ ನಾಗೇಂದ್ರಮೂರ್ತಿ, ಸಹ ಶಿಕ್ಷಕರಾದ ಮಮತ, ಪ್ರಿಯಾ, ಮನುಜಾ, ಪ್ರಕಾಶ್, ಗುಂಡಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಅರಿವು
ಮಳವಳ್ಳಿ: ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಸೋಮವಾರ ಶಾಲಾ ಅಣಕು ಸಂಸತ್ ಚುನಾವಣೆ ನಡೆಸಲಾಯಿತು.
ಶಾಲೆಯ ಆವರಣದಲ್ಲೇ ವಿದ್ಯಾರ್ಥಿಗಳಿಂದ ಅಣುಕು ಚುನವಾಣಾ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಗಳನ್ನು ನಡೆಸಲಾಯಿತು. ನಂತರ ಸರ್ಕಾರ ರಚನೆ ಹಾಗೂ ಮಂತ್ರಿ ಮಂಡಲ ಪ್ರಮಾಣವಚನ ಬೋಧನೆಯನ್ನು ರಾಜ್ಯಪಾರಾಗಿ ಕಾರ್ಯನಿರ್ವಹಿಸಿದ್ದ ಮುಖ್ಯ ಶಿಕ್ಷಕ ನಾಗೇಂದ್ರಮೂರ್ತಿ ನಡೆಸಿಕೊಟ್ಟರು. ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ವಿಧಿಗಳು ಹಾಗೂ ಚುನಾವಣೆ ನಡೆಸುವ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸವಿವರವಾಗಿ ಮಕ್ಕಳಿಗೆ ಮನಮುಟ್ಟುವಂತೆ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಮಮತಾ, ಪ್ರಿಯಾ, ಮನುಜಾ, ಪ್ರಕಾಶ್, ಗುಂಡಪ್ಪ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net