ಬೆಂಗಳೂರಿಗೆ ಹೊಸ ರೂಪ ನೀಡಲು ಡಿಕೆಶಿ ಪಣ

ಹಲಗೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಎಚ್.ಎಂ.ಶಿವಕುಮಾರ್, ಜಯಮ್ಮ, ಮಂಜು, ಬಿ.ಗಂಗಾಧರ, ಲಿಯಾಕತ್ ಆಲಿ,  ಮರಿಸ್ವಾಮಿ, ಎಂ.ಕೆ.ಮಾಹದೇವ, ಪುಟ್ಟೇಗೌಡ ಇತರರಿದ್ದರು.
ಹಲಗೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಎಚ್.ಎಂ.ಶಿವಕುಮಾರ್, ಜಯಮ್ಮ, ಮಂಜು, ಬಿ.ಗಂಗಾಧರ, ಲಿಯಾಕತ್ ಆಲಿ, ಮರಿಸ್ವಾಮಿ, ಎಂ.ಕೆ.ಮಾಹದೇವ, ಪುಟ್ಟೇಗೌಡ ಇತರರಿದ್ದರು.
Published on
ಹಲಗೂರು: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಶಿವಕುಮಾರ್ ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರ 64ನೇ ಹುಟ್ಟುಹಬ್ಬ ಅಂಗವಾಗಿ ಹಲಗೂರು ವೃತ್ತದಲ್ಲಿ ಅಭಿಮಾನಿಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ ಬಳಿಕ ಸಿಹಿ ಮತ್ತು ಲಘು ಉಪಾಹಾರ ನೀಡಿ ಮಾತನಾಡಿದರು. ಬ್ರಾೃಂಡ್ ಬೆಂಗಳೂರಿನ ಹರಿಕಾರ, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಹೊಸ ರೂಪ ನೀಡಲು ಡಿಕೆಶಿ ಪಣತೊಟ್ಟಿದ್ದಾರೆ. ಜಲ ಸಂಪನ್ಮೂಲ ಸಚಿವರಾಗಿ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಜೀವನದಿ ಕಾವೇರಿ ಮಾತೆಗೆ ನಮನ ಸಲ್ಲಿಸುವುದಕ್ಕಾಗಿ ಕಾವೇರಿ ಆರತಿ ಆರಂಭಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯೆ ಜಯಮ್ಮ, ಮುಖಂಡರಾದ ಶಿವಕುಮಾರ್(ಶಿವಪ್ಪ) ಲಿಂಗಪಟ್ಟಣದ ಮಂಜು, ಬಿ.ಗಂಗಾಧರ, ಲಿಯಾಕತ್ ಆಲಿ(ಪಿಳ್ಳು), ಮರಿಸ್ವಾಮಿ, ಎಂ.ಕೆ.ಮಾಹದೇವ, ಪುಟ್ಟೇಗೌಡ, ಚಂದನ್, ರವೀಶ, ಚೇತನ್‌ಬಾಬು, ಕೆ.ಪಿ.ಕಂಠಿ, ಶಿವಮಾದೇಗೌಡ, ಎಚ್.ಕೆ.ತೇಜ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net