ಸಮೀಪದ ಬಿದರಹೊಸಹಳ್ಳಿಯಲ್ಲಿ ಸ್ಪೂರ್ತಿ ಲಯನ್ಸ್ ಸಂಸ್ಥೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
Published on:
Copied
Follow Us
ಕೆ.ಎಂ.ದೊಡ್ಡಿ : ಸಮಾಜಸೇವೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುವ ಏಕೈಕ ಸಂಸ್ಥೆ ಲಯನ್ಸ್ ಸಂಸ್ಥೆ ಎಂದು ಸ್ಪೂರ್ತಿ ಲಯನ್ಸ್ ಸಂಸ್ಥೆ ಕೆ.ಎಲ್.ಶಿವರಾಮು ಹೇಳಿದರು.
ಸಮೀಪದ ಬಿದರಹೊಸಹಳ್ಳಿಯಲ್ಲಿ ಸ್ಪೂರ್ತಿ ಲಯನ್ಸ್ ಸಂಸ್ಥೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಇದುವರೆಗೂ ನಮ್ಮ ಸಂಸ್ಥೆ ಸ್ಥಾಪನೆಯಾಗಿ 3 ತಿಂಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬರುತ್ತಿದೆ ಎಂದರು.
ಬಡವರು, ನಿರ್ಗತಿಕರು, ಕಷ್ಟದಲ್ಲಿರುವವರಿಗೆ ಸೇವೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ತಂಡ ಶಕ್ತಿ ಮೀರಿ ಶ್ರಮಿಸುತ್ತಿದೆ. ಶಾಲಾ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ಪೆನ್, ಸಮವಸ್ತ್ರ ವಿತರಿಸಿ ಅವರ ಓದಿಗೆ ನೆರವಾಗಿರುವುದು ಉತ್ತಮ ಕೆಲಸ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯಂತೆ ಸಮಾಜದಲ್ಲಿರುವ ಇತರ ಸಂಘ ಸಂಸ್ಥೆಗಳು, ಹಣವಂತರು ಕೂಡ ಈ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಮಾಜ ಮತ್ತಷ್ಟು ಸುಧಾರಿಸುತ್ತದೆ ಎಂದರು.
ಸ್ಪೂರ್ತಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಬೋರೇಗೌಡ, ಸದಸ್ಯರಾದ ಪುಟ್ಟರಾಮು ರಾಜೇ ಅರಸ್, ಚಂದ್ರಶೇಖರ್, ವಕ್ರತುಂಡ ವೆಂಕಟೇಶ್, ರಘುವೆಂಟೇಗೌಡ, ಕಿರಣ, ಸಂದೀಪ್, ದೇವರಾಜು, ಕೃಷ್ಣೇಗೌಡ ಮತ್ತಿತರರು ಇದ್ದರು.