ಸಮಾಜಕ್ಕೆ ಮಾಡುವ ಸೇವೆ ನಿಸ್ವಾರ್ಥವಾಗಿರಲಿ: ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೌತ್ ಅಧ್ಯಕ್ಷೆ ಶಿಲ್ಪಾ ಹೇಳಿಕೆ
ಮಂಡ್ಯ ತಾಲೂಕು ಗೊರವಾಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಕ್ರೀಡಾ ಶೂಗಳನ್ನು ವಿತರಿಸಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಶೂಗಳನ್ನು ವಿತರಣೆ
ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೂ ನೆರವು ನೀಡುವುದಾಗಿ ಘೋಷಣೆ
ಮಂಡ್ಯ: ನಾವು ಸಮಾಜಕ್ಕೆ ಮಾಡುವ ಸೇವೆ ಅಥವಾ ಸಹಾಯ ನಿಸ್ವಾರ್ಥವಾಗಿರಬೇಕೇ ವಿನಃ ಸ್ವಾರ್ಥದಿಂದ ಇರಬಾರದು ಎಂದು ಬೆಂಗಳೂರಿನ ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೌತ್ ಅಧ್ಯಕ್ಷೆ ಶಿಲ್ಪಾ ವೆಂಕಟೇಶ್ ಹೇಳಿದರು.
ತಾಲೂಕಿನ ಗೊರವಾಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಶೂಗಳನ್ನು ವಿತರಿಸಿ ಮಾತನಾಡಿದ ಅವರು, ನಾವು ದುಡಿದಂತಹ ಹಣದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ದಾನ ಧರ್ಮವನ್ನು ಮಾಡಿದಾಗ ಸಿಗುವ ಖುಷಿ ಅಪಾರ. ಜತೆಗೆ ಸೇವೆಯಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸಬಾರದು. ನಾವು ಮಾಡಿದಂತಹ ಸೇವೆಗೆ ಒಂದು ಗೌರವ ಇರುತ್ತದೆ. ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೂ ನೆರವು ನೀಡುವುದಾಗಿ ತಿಳಿಸಿದರು.
ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷರಾದ ಪೂರ್ಣಿಮಾ ವರದರಾಜು, ವೀಣಾ ಶಂಕರ್, ವತ್ಸಲಾ ಮೋಹನ್, ಮಧು ನಿರಂಜನ್ ಇತರರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಕ್ರೀಡಾ ಶೂಗಳನ್ನು ವಿತರಿಸಲಾಯಿತು.