ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಮದ್ದೂರು ತಾಲೂಕು ವಳಗೆರೆಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಸ್ಯ ಶ್ಯಾಮಲಾ ಫೌಂಡೇಶನ್‌ನಿಂದ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಸೌಮ್ಯಶ್ರೀ ಮುಕುಂದ, ಅಭಯ್, ಅಮೂಲ್ಯಾ, ಸೀತಾರಾಮ್, ಅನಿಲ್‌ಕುಮಾರ್, ಡಿ.ಮಹಾದೇವಪ್ಪ ಇದ್ದರು.
ಮದ್ದೂರು ತಾಲೂಕು ವಳಗೆರೆಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಸ್ಯ ಶ್ಯಾಮಲಾ ಫೌಂಡೇಶನ್‌ನಿಂದ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಸೌಮ್ಯಶ್ರೀ ಮುಕುಂದ, ಅಭಯ್, ಅಮೂಲ್ಯಾ, ಸೀತಾರಾಮ್, ಅನಿಲ್‌ಕುಮಾರ್, ಡಿ.ಮಹಾದೇವಪ್ಪ ಇದ್ದರು.
Published on
ಮದ್ದೂರು: ತಾಲೂಕಿನ ವಳಗೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆ ಜಿಮತ್ತು ಯುಕೆಜಿ ಮಕ್ಕಳಿಗೆ ಬೆಂಗಳೂರಿನ ಸಸ್ಯ ಶಾಮಲಾ ಫೌಂಡೇಶನ್‌ನಿಂದ ಸೋಮವಾರ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ಹಾಗೂ ಶಾಲೆ ಗ್ರೀನ್ ಬೋರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ನ ಅಧ್ಯಕ್ಷೆ ಸೌಮ್ಯಶ್ರೀ ಮುಕುಂದ, ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳಂತೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂಬ ಉದ್ದೇಶದಿಂದ ಗ್ರಾಮದ ಮೊಮ್ಮಗಳಾದ ನಾನು ಸಸ್ಯ ಶಾಮಲಾ ಫೌಂಡೇಶನ್‌ನಿಂದ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮದ ಮಕ್ಕಳು ಸ್ಪೋಕನ್ ಇಂಗ್ಲಿಷ್ ಕಲಿಯಬೇಕೆಂಬ ಉದ್ದೇಶದಿಂದ ತರಗತಿ ಸಹ ಆರಂಭಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಶಾಲೆಯ ಮಕ್ಕಳು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಗತ್ಯವಾದ ಕ್ರೀಡಾ ಸಾಮಗ್ರಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಸ್ಯ ಶಾಮಲಾ ಫೌಂಡೇಶನ್ ಅಭಯ್, ಅಮೂಲ್ಯಾ, ರೈತ ಸಂಘದ ಅಧ್ಯಕ್ಷ ರಾಂಪುರ ಸೀತಾರಾಮ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಇಂದಿರಾ, ಶಾಲೆಯ ಮುಖ್ಯಶಿಕ್ಷಕ ಡಿ.ಮಹಾದೇವಪ್ಪ, ಶಿಕ್ಷಕರಾದ ಆರ್.ಎನ್.ನಾಗೇಂದ್ರ, ಎಂ.ಎಸ್.ಚಂದ್ರಕಲಾ, ಬಿ.ಸಿ.ವೆಂಕಟಲಕ್ಷ್ಮೀ, ಎಚ್.ಅರುಣ್, ಕಾಜಿಮಿ ಸುಲ್ತಾನ, ಕೆ.ವಿ.ಹರ್ಷ ಹಾಗೂ ಅನಿಲ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net