ಕಾರ್ಪೊರೇಟ್ ಪರ ರಾಜಕೀಯ ಪಕ್ಷಗಳು

ಬ್ಯಾಡರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬ್ಯಾಡರಹಳ್ಳಿ ಗ್ರಾಮ ಶಾಖೆ ಉದ್ಘಾಟಿಸಿದರು. ಕೆಂಪೂಗೌಡ, ಬೋರಾಪುರ ಶಂಕರೇಗೌಡ, ಶಿವರುದ್ರಪ್ಪ, ಹಲಗೂರು ಶ್ರೀನಿವಾಸ್, ಬಾಣಸಮುದ್ರ ದೇವರಾಜು, ದೊಡ್ಡಬೂಹಳ್ಳಿ ನಟರಾಜು, ಹುಸ್ಕೂರು ರಘು, ಸಿದ್ದೇಗೌಡ ಇತರರು ಇದ್ದರು.
ಬ್ಯಾಡರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬ್ಯಾಡರಹಳ್ಳಿ ಗ್ರಾಮ ಶಾಖೆ ಉದ್ಘಾಟಿಸಿದರು. ಕೆಂಪೂಗೌಡ, ಬೋರಾಪುರ ಶಂಕರೇಗೌಡ, ಶಿವರುದ್ರಪ್ಪ, ಹಲಗೂರು ಶ್ರೀನಿವಾಸ್, ಬಾಣಸಮುದ್ರ ದೇವರಾಜು, ದೊಡ್ಡಬೂಹಳ್ಳಿ ನಟರಾಜು, ಹುಸ್ಕೂರು ರಘು, ಸಿದ್ದೇಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಡಗಲಪುರ ನಾಗೇಂದ್ರ ಅತಂಕ
ಹಲಗೂರು: ಹಸಿರು ಟವಲ್‌ಗೆ ತಮ್ಮದೇ ಮೌಲ್ಯವಿದೆ. ಆದರೆ ಹಸಿರು ಟವಲ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ರಾಜಕಾರಣಿಗಳು ಸಮಯಕ್ಕೆ ತಕ್ಕ ಹಾಗೆ ವಿವಿಧ ಬಗೆಯ ಬಣ್ಣ ಬಣ್ಣದ ಟವಲ್ ಧರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ ವ್ಯಕ್ತಪಡಿಸಿದರು.
ಹಲಗೂರು ಸಮೀಪದ ಬ್ಯಾಡರಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕರ್ನಾಟಕ ರಾಜ್ಯ ರೈತ ಸಂಘದ ಬ್ಯಾಡರಹಳ್ಳಿ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಕಂಪನಿಗಳು ರೈತರಿಂದ ಭೂಮಿ ಪಡೆಯುತ್ತವೆ. ಆದರೆ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಚಳವಳಿ ಹಿಮ್ಮೆಟ್ಟಿಸಲು ಸರ್ಕಾರಗಳು ಪ್ರಯತ್ನ ಮಾಡುತ್ತಿವೆ. ಆದರೆ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ನಮ್ಮನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಕುಳಗಳ ಪರವಾಗಿ ಕಾನೂನು ರೂಪಿಸುತ್ತಿದ್ದು, ಸರ್ಕಾರದ ನೀತಿಗಳು ಹಳ್ಳಿಗಳು ಮತ್ತು ಬಡಜನರನ್ನು ಒಕ್ಕಲೆಬ್ಬಿಸುತ್ತಿವೆ. ಯುವಜನರು ಒಂದಾಗಿ ಮುಂದೆ ಬನ್ನಿ. ರೈತ ಸಂಘದ ವತಿಯಿಂದ ಏರ್ಪಡಿಸುವ ಶಿಬಿರಗಳಲ್ಲಿ ಭಾಗವಹಿಸಿ. ದೇಶಕ್ಕೆ ಅಗತ್ಯ ಇರುವ ಮೌಲ್ಯಯುತ ಚಳವಳಿ ಕಟ್ಟೋಣ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಹಕ್ಕೊತ್ತಾಯಗಳು ಮತ್ತು ಸಾಮಾಜಿಕ ನ್ಯಾಯ ಪಡೆಯಲು ಹೋರಾಟಗಳ ಅಗತ್ಯವಿದೆ. ಹೋರಾಟಗಾರರ ಜತೆಗೆ ಯುವ ಸಮೂಹ ರೈತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೇ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಲಿದ್ದು, ಅನ್ಯಾಯದ ವಿರುದ್ಧ, ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆಂಪೂಗೌಡ, ಬೋರಾಪುರ ಶಂಕರೇಗೌಡ, ತಾಲೂಕು ಅಧ್ಯಕ್ಷ ಶಿವರುದ್ರಪ್ಪ, ಹಲಗೂರು ಶ್ರೀನಿವಾಸ್, ಬಾಣಸಮುದ್ರ ದೇವರಾಜು, ದೊಡ್ಡಬೂಹಳ್ಳಿ ನಟರಾಜು, ಹುಸ್ಕೂರು ರಘು, ಸಿದ್ದೇಗೌಡ, ಗ್ರಾಮ ಘಟಕದ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ಮಧು, ಪ್ರಧಾನ ಕಾರ್ಯದರ್ಶಿ ಅರುಣ್, ಖಜಾಂಚಿ ರಮೇಶ್, ಸದಸ್ಯರಾದ ಮಹೇಶ್, ಶೇಖರ್, ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net