ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಸಿ

ಮದ್ದೂರು ತಾಲೂಕಿನ ನಂಬಿನಾಯಕನಹಳ್ಳಿ ಸರ್ಕಾರಿ ಶಾಲೆಗೆ ನೆಲಹಾಸು ಸೇರಿದಂತೆ ಇನ್ನಿತರ ಪರಿಕರಗಳನ್ನು  ವಿತರಿಸಲಾಯಿತು. ಕೆ.ಟಿ.ಶ್ರೀಕಂಠೇಗೌಡ, ರಜನಿ ರಾಜ್, ಕುಮಾರ್ ಕೊಪ್ಪ,  ಜಿ.ಟಿ.ವೀರಪ್ಪ, ಸತೀಶ್, ಕೃಷ್ಣೇಗೌಡ, ಯೋಗಾನಂದ, ಪುನೀತ್‌ಕುಮಾರ್ ಇದ್ದರು.

Published on
ಮದ್ದೂರು: ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್‌ನ ಸಂಸ್ಥಾಪಕಿ ರಜನಿ ರಾಜ್ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ನಂಬಿನಾಯಕನಹಳ್ಳಿ ಸರ್ಕಾರಿ ಶಾಲೆಗೆ ಸೋಮವಾರ ನೆಲಹಾಸು ಸೇರಿದಂತೆ ಇನ್ನಿತರ ಪರಿಕರ ವಿತರಿಸಿ ಮಾತನಾಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಶಿಕ್ಷಣದಷ್ಟೇ ಮುಖ್ಯ. ಆರೋಗ್ಯಕರ ಸಮಾಜಕ್ಕೆ ಇವುಗಳು ಪೂರಕವಾಗುತ್ತವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದರು.
ಪು.ತಿ.ನ ಟ್ರಸ್ಟ್ ಸದಸ್ಯ ಕುಮಾರ್ ಕೊಪ್ಪ, ಮಾನವ ರಾಷ್ಟ್ರೀಯ ಹಕ್ಕುಗಳ ಪುರುಷರ ರಕ್ಷಣಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜಿ.ಟಿ.ವೀರಪ್ಪ, ಕಾರ್ಯದರ್ಶಿ ಸತೀಶ್, ನಿರ್ದೇಶಕ ಕೃಷ್ಣೆಗೌಡ, ಸಂಯೋಜಕ ಬಸವರಾಜು, ಮುಖ್ಯ ಶಿಕ್ಷಕ ಯೋಗಾನಂದ, ಪಿಎಸ್‌ಐ ಪುನೀತ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net