ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ವಲಯದ ಕೂಳೆಗೆರೆ ಗ್ರಾಮದಲ್ಲಿನ ಶ್ರೀ ಬನ್ನೂರು ಹೇಮಾದ್ರಮ್ಮ ಮತ್ತು ಶ್ರೀ ಬದ್ನಾಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರದಿಂದ ಮಂಜೂರು ಮಾಡಿರುವ 1 ಲಕ್ಷ ರೂ. ಮೊತ್ತದ ಡಿಡಿ ಯನ್ನು ಎಂ.ಎ.ಹಾಲಪ್ಪ ವೆಂಕಟೇಶ್ವರ ಅವರಿಗೆ ಹಸ್ತಾಂತರ ಮಾಡಿದರು.
ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ವಲಯದ ಕೂಳೆಗೆರೆ ಗ್ರಾಮದಲ್ಲಿನ ಶ್ರೀ ಬನ್ನೂರು ಹೇಮಾದ್ರಮ್ಮ ಮತ್ತು ಶ್ರೀ ಬದ್ನಾಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ಮಂಜೂರು ಮಾಡಿರುವ 1ಲಕ್ಷ ರೂ. ಮೊತ್ತದ ಡಿಡಿ ಯನ್ನು ತಾಲೂಕಿನ ಯೋಜನಾಧಿಕಾರಿ ಎಂ.ಎ.ಹಾಲಪ್ಪ ದೇವಸ್ಥಾನದ ಸಮಿತಿಯ ಅಧ್ಯಕ್ಷ ವೆಂಕಟೇಶ್ವರ ಅವರಿಗೆ ಹಸ್ತಾಂತರ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಕೂಳಗೆರೆ ಗ್ರಾಮದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ ಡಿಡಿಯನ್ನು ಹಸ್ತಾಂತರ ಮಾಡಲಾಯಿತು ಎಂದು ಹಾಲಪ್ಪ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪೂಜ್ಯರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮುಂದಿನ ಯುವಪೀಳಿಗೆಯು ಇಂತಹ ಕಾರ್ಯಕ್ರಮಗಳಿಂದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವವರಾಗಿರಬೇಕು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ಶುಭ ಹಾರೈಸಿದರು.
ಸಮಿತಿ ಅಧ್ಯಕ್ಷ ವೆಂಕಟೇಶ್, ದೇವಾಲಯದ ಸಮಿತಿ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ ಹಾಗೂ ಸದಸ್ಯರು ಹಾಜರಿದ್ದರು.