ಜಂತು ಹುಳು ನಿವಾರಣಾ ಕಾರ್ಯಕ್ರಮ

ಕೆ.ಆರ್.ಸಾಗರದ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ  ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಯರಾಂ,  ಜಯಲಕ್ಷ್ಮೀ, ಕೆ.ರೂಪಾ, ಲತಾ ಹಾಜರಿದ್ದರು.
ಕೆ.ಆರ್.ಸಾಗರದ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಯರಾಂ, ಜಯಲಕ್ಷ್ಮೀ, ಕೆ.ರೂಪಾ, ಲತಾ ಹಾಜರಿದ್ದರು.
Published on

ಕೆ.ಆರ್.ಸಾಗರ:

ಇಲ್ಲಿನ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಗಿಡಕ್ಕೆ ನೀರು ಎರೆಯುವ ಮೂಲಕ ರಾಷ್ಟ್ರೀಯ ಜಂತುಹುಳು ದಿನಾಚರಣೆಗೆ ಗಣ್ಯರು ಚಾಲನೆ ನೀಡಿದರು.

ಹಿರಿಯ ಅರೋಗ್ಯ ನಿರಿಕ್ಷಕ ಜಯರಾಂ ಅವರು 1ರಿಂದ 19 ವರ್ಷದ ಮಕ್ಕಳಿಗೆ ಜಂತು ಹುಳುವಿನ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಿ ಮಾತನಾಡಿ, ಈ ಮಾತ್ರೆ ರಕ್ತ ಹೀನತೆ ನಿವಾರಿಸಿ ಬುದ್ಧಿ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಎಲ್ಲರೂ ತಪ್ಪದೇ ಸೇವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಜಯಲಕ್ಷ್ಮೀ, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರಾದ ಕೆ.ರೂಪಾ, ಲತಾ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net