ತಾಲೂಕಿನ ಹಿರೇಮರಳಿ ಮತ್ತು ವಡ್ಡರಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪಟ್ಟಣದ ಬೀರಶೆಟ್ಟಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ, ಕ್ಷೇತ್ರ ವ್ಯಾಪ್ತಿಯ ಮೊಡಚಾಕನಹಳ್ಳಿಯಲ್ಲಿ ಅಂಬೇಡ್ಕರ್ ಭವನವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಪುರಸಭೆ ನಾಮಿನಿ ಸದಸ್ಯರಾದ ಮುರಳೀಧರ್, ಲಕ್ಷ್ಮೇಗೌಡ, ಒಳಚರಂಡಿ ಮಂಡಳಿಯ ಇಇ ನದಾಫ್, ಅನಿಲ್, ಮುಖಂಡರಾದ ಮಿಲ್ ಸಂತೋಷ್, ಲವಕುಮಾರ್, ಯೋಗಿ, ರಾಜು ಇತರರು ಇದ್ದರು.