ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪಟ್ಟಣದ ಅಂಚೆ ಕಚೇರಿ ಬಳಿ ರಾಜ್ಯಪಾಲರಿಗೆ ಪತ್ರ ಚಳವಳಿ ನಡೆಸಿದರು. ಸುನಂದಾ ಜಯರಾಮು, ಬಿ.ಜಿ.ಹೊನ್ನಯ್ಯ, ಮೋಹನ್, ಗೌರಮ್ಮ, ಸವಿತಾ, ಗುರುಲಿಂಗಯ್ಯ, ಅಶ್ವಿನಿ, ಭಾಗ್ಯಾ ಇದ್ದರು.
Published on:
Copied
Follow Us
ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ರಾಜ್ಯಪಾಲರಿಗೆ ಪತ್ರ ಕಳುಹಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಗೆಜ್ಜಲಗೆರೆ ಗ್ರಾಮದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಸ್ಥಳೀಯ ನಿವಾಸಿಗಳು ರಾಜ್ಯಪಾಲರಿಗೆ ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿ ನಡೆಸಿ ನಗರಸಭೆಯಿಂದ ಗೆಜ್ಜಲಗೆರೆ ಗ್ರಾಮವನ್ನು ಕೈಬಿಡುವಂತೆ ಆಗ್ರಹಿಸಿದರು.
ರೈತ ನಾಯಕಿ ಸುನಂದಾ ಜಯರಾಮು ಮಾತನಾಡಿ, ನಗರಸಭೆಯಿಂದ ಗೆಜ್ಜಲಗೆರೆ ಗ್ರಾಮವನ್ನು ಕೈಬಿಡುವಂತೆ ಒತ್ತಾಯಿಸಿ ಕಳೆದ 87 ದಿನಗಳಿಂದ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ನಿರಂತರವಾಗಿ ಧರಣಿ ಕೈಗೊಳ್ಳುವ ಜತೆಗೆ ಅಹೋರಾತ್ರಿ ಧರಣಿ ಕೈಗೊಂಡಿದ್ದು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ನಗರಸಭೆಯಿಂದ ಗೆಜ್ಜಲಗೆರೆ ಗ್ರಾಮವನ್ನು ಸರ್ಕಾರ ಕೈ ಬಿಡಬೇಕು ಎಂಬ ಉದ್ದೇಶದಿಂದ ಗ್ರಾಮಸ್ಥರು ರಾಜ್ಯಪಾಲರಿಗೆ ಪತ್ರ ಚಳವಳಿ ಕೈಗೊಂಡಿದ್ದು, ಶಾಸಕರು ಇನ್ನಾದರೂ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ನಗರಸಭೆಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಕೈ ಬಿಡುವ ಮೂಲಕ ಕಳೆದ ಹಲವು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಅಂತ್ಯ ಹಾಡಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಯೋಧ ಬಿ.ಜಿ.ಹೊನ್ನಯ್ಯ, ಹೋರಾಟಗಾರರಾದ ಮೋಹನ್, ಗೌರಮ್ಮ, ಸವಿತಾ, ಗುರುಲಿಂಗಯ್ಯ, ಅಶ್ವಿನಿ, ಭಾಗ್ಯಾ, ವೀರಪ್ಪ, ಕೃಷ್ಣ, ಯೋಗೇಶ್, ರಾಮು, ರಾಜಣ್ಣ, ಚಿಕ್ಕೋಳಮ್ಮ ಇತರರು ಇದ್ದರು.