ಸೂಚನಾ ಫಲಕ ಅಳವಡಿಕೆಗೆ ಒತ್ತಾಯ

ಪಾಂಡವಪುರ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ ಹಾಕುವಂತೆ ಹಾಗೂ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಇತರರು ಇದ್ದರು.
ಪಾಂಡವಪುರ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ ಹಾಕುವಂತೆ ಹಾಗೂ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ
ಪಾಂಡವಪುರ: ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತ(ಮಂಡ್ಯ ಸರ್ಕಲ್)ನಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ ಹಾಗೂ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆಗೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಮಂಡ್ಯ ಸರ್ಕಲ್‌ನಲ್ಲಿ ಮಾರ್ಗಸೂಚಿ ಸೂಚನಾ ಫಲಕ ಹಾಕಿಲ್ಲ. ಪರಿಣಾಮ ಮೈಸೂರು ಕಡೆಯಿಂದ ಬರುವ ಬಾರಿ ವಾಹನಗಳ ನೇರವಾಗಿ ಕಿರಿದಾಗಿರುವ ಹಳೇ ನಾಗಮಂಗಲ ರಸ್ತೆಯಲ್ಲಿ ಹೋಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ನಿರ್ಲಕ್ಷೃ ತೋರುತ್ತಿದ್ದಾರೆ. ಕಳೆದ ಬಾರಿ ಪ್ರತಿಭಟನೆ ನಡೆಸಿದ್ದ ವೇಳೆ ಜೂ.25ರೊಳಗೆ ಅಳವಡಿಸುವ ನೀಡಿದ್ದರು. ಆದರೆ, ಜುಲೈ ಬಂದರೂ ಮಾರ್ಗಸೂಚಿ ನಾಮಫಲಕ ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು.
ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುತ್ತವೆ. ರಸ್ತೆಯಲ್ಲಿ ಸ್ಪೀಡ್‌ಬ್ರೇಕರ್ ಹಾಕದೆ ಇರುವುದರಿಂದ ಹೆಚ್ಚು ಅಪಘಾತವಾಗುತ್ತಿವೆ. ಹಾಗಾಗಿ ಹಿರೇಮರಳಿ ಗೇಟ್, ಮಂಡ್ಯ ಸರ್ಕಲ್, ಹರಳಹಳ್ಳಿ ಬಳಿ ರಸ್ತೆಗೆ ಸ್ಪೀಡ್‌ಬ್ರೇಕರ್ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಒಂದು ವಾರದೊಳಗೆ ಸೂಚನಾ ಫಲಕ ಅಳವಡಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net