ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಿ

ಮದ್ದೂರು ತಾಲೂಕಿನ ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರನ್ನು ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು. ಪಿ.ಸಂದರ್ಶ, ಹರೀಶ್‌ಬಾಬು, ಸುಧಾಕರ್, ಪುಟ್ಟೇಗೌಡ, ಶರತ್, ಮಧು, ಶಿವರಾಮ್ ಸೇರಿದಂತೆ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • eligible beneficiaries
ಮದ್ದೂರು: ಸಹಕಾರ ಸಂಘದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ತಲುಪುವಂತೆ ನೋಡಿಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರನ್ನು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಭಿನಂದಿಸಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಂಘದ ಮೂಲಕ ಸದಸ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಸಂಘದ ಷೇರುದಾರರು ರಾಜಕೀಯ ಬೆರೆಸದೆ ಒಗ್ಗಟ್ಟಿನಿಂದ 11 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿಯಾಗಿದ್ದು, ನೂತನ ಆಡಳಿತ ಮಂಡಳಿ ಸಂಘದ ಮತ್ತಷ್ಟು ಉನ್ನತೀಕರಣಕ್ಕೆ ಶ್ರಮಿಸಬೇಕೆಂದರು.
ಸಂಘದ ನೂತನ ನಿರ್ದೇಶಕರಾದ ಪಿ.ಸಂದರ್ಶ್, ರಜತ್, ಬಿ.ಪಿ.ಶಂಭೂಗೌಡ, ಸಿ.ಸಿದ್ದಯ್ಯ, ಪುಟ್ಟಸ್ವಾಮಿ, ಮಮತಾ, ಮಂಗಳ ಗೌರಮ್ಮ, ರಾಮು, ನರಸಿಂಹಮೂರ್ತಿ, ಬಿ.ಎಲ್.ಕೃಷ್ಣಪ್ಪ, ಎಸ್.ಪ್ರಸನ್ನ ಅವರನ್ನು ಶಾಸಕರು ಅಭಿನಂದಿಸಿದರು.
ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಸುಧಾಕರ್, ಪುಟ್ಟೇಗೌಡ, ಶರತ್, ಮಧು, ಶಿವರಾಂ, ಸುಧಾಕರ್, ಶ್ರೀನಿವಾಸ್, ಶೀತಲ್, ಪ್ರಭುಲಿಂಗ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net