ಪುರಸಭೆಗೆ ಬಾಕಿ ತೆರಿಗೆ ಪಾವತಿ ಮಾಡಲು ತೀರ್ಮಾನ

ಪಾಂಡವಪುರದ ಹಿರೋಡೆ ಬೀದಿಯ ಒಕ್ಕಲಿಗ ಜನಾಂಗದ ಶ್ರೀರಾಮಾಂಜನೇಯ ಸೇವಾ ಸಮಿತಿ ಆವರಣದಲ್ಲಿ ಆಯೋಜಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪಿ.ರಮೇಶ್ ಮಾತನಾಡಿದರು.
ಪಾಂಡವಪುರದ ಹಿರೋಡೆ ಬೀದಿಯ ಒಕ್ಕಲಿಗ ಜನಾಂಗದ ಶ್ರೀರಾಮಾಂಜನೇಯ ಸೇವಾ ಸಮಿತಿ ಆವರಣದಲ್ಲಿ ಆಯೋಜಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪಿ.ರಮೇಶ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮಾಂಜನೇಯ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ
ಪಾಂಡವಪುರ: ಪಟ್ಟಣದ ಹಿರೋಡೆ ಬೀದಿಯಲ್ಲಿರುವ ಒಕ್ಕಲಿಗ ಜನಾಂಗದ ಶ್ರೀರಾಮಾಂಜನೇಯ ಸೇವಾ ಸಮಿತಿಯ 2025ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷ ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಸಮಿತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ, ಸಂಘದಲ್ಲಿ ನಡೆದಿರುವ ಹಣಕಾಸಿನ ಆಡಿಟ್ ವರದಿ ಹಾಗೂ ಸಂಸದರು, ಶಾಸಕರ ಅನುದಾನ ಎಷ್ಟು ಬಿಡುಗಡೆಯಾಗಿದೆ, ಅನುದಾನ ಖರ್ಚು ಮಾಡಲಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಸದಸ್ಯ ಪಿ.ಎಲ್.ಆದರ್ಶ, ಗಿರೀಶ್ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.
ಪುರಸಭೆಗೆ ಕಟ್ಟಬೇಕಿರುವ ಸಂಘದ ಆಸ್ತಿಯ ತೆರಿಗೆ ಕಳೆದ ಮೂರು ವರ್ಷದಿಂದ ಬಾಕಿ ಉಳಿದಿದೆ. ಸಂಘದಲ್ಲಿ ವ್ಯವಹಾರಿಕವಾಗಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಮೊದಲು ಸಂಘದ ಬಾಕಿ ತೆರಿಗೆಯನ್ನು ಪಾವತಿಸಿವಂತೆ ಸಭೆಯಲ್ಲಿ ಷೇರುದಾರ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪುರಸಭೆಗೆ ಬಾಕಿ ತೆರಿಗೆ ಪಾವತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮವಹಿಸುವುದರ ಜತೆಗೆ ಸಂಘದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಆಡಳಿತ ಮಂಡಳಿ ಮುಂದಾಗಬೇಕು. ಸಂಘದ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸುವ ಕುರಿತು ಚರ್ಚಿಸಲಾಯಿತು.
ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ಒಕ್ಕಲಿಗ ಜನಾಂಗದ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಎಲ್ಲರ ಜತೆಗೂಡಿ, ಷೇರುದಾರರ ಸಹಕಾರದೊಂದಿಗೆ ಸಂಘವನ್ನು ಅಭಿವೃದ್ಧಿ ಪಡಿಸುವ ಜತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಕೆ.ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಆರ್.ಚನ್ನಕೇಶವ, ನಿರ್ದೇಶಕರಾದ ಕೆ.ವೆಂಕಟರಮಣೇಗೌಡ, ನರಸಿಂಹೇಗೌಡ, ಕೆ.ಪ್ರಸಾದ್, ಎಚ್.ಪಿ.ನವೀನ್‌ಕುಮಾರ್, ಚಂದ್ರೇಗೌಡ, ಆರ್.ಕೋದಂಡ, ಎನ್.ದಿಲೀಪ್, ಎಸ್.ಚಂದ್ರಶೇಖರ್, ವಿ.ಗಿರೀಶ್, ಎಸ್.ಚಂದ್ರಶೇಖರ್, ಸೋಮಶೇಖರ್, ಪಿ.ಎಲ್.ಹರ್ಷ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net