ಬೆಳಗೊಳ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿ.ಜಗದೀಶ್ ಅಧ್ಯಕ್ಷ
ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತರ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಜಗದೀಶ್ ಅವರನ್ನು ಅಭಿನಂದಿಸಲಾಯಿತು. ಸಿದ್ದರಾಜು, ಮಾಜಿ ಅಧ್ಯಕ್ಷ ಸುಪ್ರಿಯಾ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ಹರೀಶ್, ಸದಸ್ಯ ಪರಶುರಾಮ, .ಎಂ.ಎಚ್.ಶ್ರೀನಿವಾಸ್, ಕಿರಣ್, ಗ್ರಾಮದ ಯಜಮಾನರಾದ ಶ್ರೀನಿವಾಸೇಗೌಡ, ಮುಖಂಡರಾದ ರವಿಕುಮಾರ್, ರವಿ, ತಾ.ಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ರಜಿನಿ, ದೇವರಾಜು, ಪುನೀತ್ ಇತರರು ಇದ್ದರು.
Published on:
Copied
Follow Us
ಕೆ.ಆರ್.ಸಾಗರ: ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಡಿ.ಜಗದೀಶ್ ಆಯ್ಕೆಯಾಗಿದರು.
12 ಸದಸ್ಯರಿರುವ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಗೆ 5 ಸದಸ್ಯರು ಗೈರಾಗಿದ್ದರು. ಸುಪ್ರಿಯಾ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.ಜಗದೀಶ್ ಮತ್ತು ಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಲಕ್ಷ್ಮೀ ಸೇರಿದಂತೆ ಐವರು ಸದಸ್ಯರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಡಿ.ಜಗದೀಶ್ ವಿಜೇತರಾದರು. ಚುನಾವಣೆ ಅಧಿಕಾರಿಯಾಗಿ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಕಾರ್ಯನಿರ್ವಹಿಸಿದರು.
ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದರಾಜು, ಮಾಜಿ ಅಧ್ಯಕ್ಷ ಸುಪ್ರಿಯಾ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ಹರೀಶ್, ಸದಸ್ಯ ಪರಶುರಾಮ, .ಎಂ.ಎಚ್.ಶ್ರೀನಿವಾಸ್, ಕಿರಣ್, ಗ್ರಾಮದ ಯಜಮಾನರಾದ ಶ್ರೀನಿವಾಸೇಗೌಡ, ಮುಖಂಡರಾದ ರವಿಕುಮಾರ್, ರವಿ, ತಾ.ಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ರಜಿನಿ, ದೇವರಾಜು, ಪುನೀತ್ ಇತರರು ಇದ್ದರು.