ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತಯಾರು ಮಾಡಿದ ಭಾಷಣವನ್ನು ರಾಜ್ಯಪಾಲರು ಓದುವುದು ಪರಿಪಾಠ. ಎಲ್ಲ ರಾಜ್ಯದ ರಾಜ್ಯಪಾಲರು ಅದನ್ನು ಓದಬೇಕು. ಹೀಗಿರುವಾಗ ಭಾಷಣ ಮಾಡದೇ ಹೋಗಿದ್ದು ಸರಿಯಲ್ಲ. ರಾಜ್ಯಪಾಲರು ಕೇಂದ್ರ ಸರ್ಕಾರದ ರೆಪ್ರೆಸೆಂಟೇಟಿವಾ?. ಹಾಗಿದ್ದರೆ ಅವರು ಬಿಜೆಪಿ ಪರ, ಕೇಂದ್ರ ಸರ್ಕಾರದ ಏಜೆಂಟ್ ಎಂದು ಘೋಷಣೆ ಮಾಡಲಿ. ಆಗ ಈ ಪ್ರಶ್ನೆಯೇ ಬರಲ್ಲ. ಕುಮಾರಸ್ವಾಮಿಯವರೇ ಹಿಂದೆ ಸಿಎಂ ಆಗಿದ್ದಾಗ ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಏಜೆಂಟ್ ಎಂದಿದ್ದರು. ತಮಿಳುನಾಡು, ಕೇರಳದಲ್ಲೂ ಇದೇ ಆಗಿದೆ. ಪರಿಣಾಮ ಇದರಿಂದ ರಾಜ್ಯದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ಈ ರೀತಿ ನಿರ್ದೇಶನ ಕೊಡಬಾರದು ಎಂದರು.