ವ್ಯಾಪಾರ ವಹಿವಾಟಿಗೆ ವಿವಿಧ ಪೇಟೆ ನಿರ್ಮಾಣ

ಹಲಗೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಆಚರಿಸಲಾಯಿತು. ಲಿಂಗಪಟ್ಟಣ ಗಂಗಾಧರ್, ನಾಗೇಶ್,ಆನಂದ್, ಶಿವಲಿಂಗು ರವೀಶ್ ಇತರರಿದ್ದರು.
ಹಲಗೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಆಚರಿಸಲಾಯಿತು. ಲಿಂಗಪಟ್ಟಣ ಗಂಗಾಧರ್, ನಾಗೇಶ್,ಆನಂದ್, ಶಿವಲಿಂಗು ರವೀಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಟಿ.ಶ್ರೀನಿವಾಸ್ ಶ್ಲಾಘನೆ
ಹಲಗೂರು: ಕೆಂಪೇಗೌಡರು ಧರ್ಮನಿರಪೇಕ್ಷ ಹಾಗೂ ಆದರ್ಶ ವ್ಯಕ್ತಿಯಾಗಿದ್ದು, ಸಾಮಂತ ದೊರೆಯಾಗಿ ಬೆಂಗಳೂರನ್ನು ರೂಪಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಟಿ.ಶ್ರೀನಿವಾಸ ತಿಳಿಸಿದರು.
ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣಾ ಸಮಿತಿ ವತಿಯಿಂದ ಹಲಗೂರಿನ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ವಿವಿಧ ಪೇಟೆಗಳನ್ನು ನಿರ್ಮಿಸಿ, ನಗರವನ್ನು ವಾಣಿಜ್ಯ ಕೇಂದ್ರವಾಗಿ ಬೆಳೆಯುವಂತೆ ಮಾಡಿದರು. ಅದರ ಫಲವಾಗಿ ಇಂದು ಬೆಂಗಳೂರು ವಿಶ್ವಪ್ರಸಿದ್ಧ ನಗರವಾಗಿ ಹೊರಹೊಮ್ಮಿದೆ ಎಂದರು.
ಹಲಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರ ಮಾತನಾಡಿ, ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಅವರು ತೋರಿಸಿದ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಭಾಗವಹಿಸಿದವರಿಗೆ ಲಘು ಉಪಾಹಾರ ವಿತರಿಸಲಾಯಿತು.
ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಲಿಂಗಪಟ್ಟಣ ಗಂಗಾಧರ್, ಗೊಲ್ಲರಹಳ್ಳಿ ನಾಗೇಶ್, ಕರೀಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆನಂದ್, ಶಿವಲಿಂಗು ರವೀಶ್, ವಂದರಿ ಬಾಬು, ಶಿವರಾಜು, ಜಗದೀಶ್, ಚಂದನ್, ಮಹದೇವ , ಗಂಗಾಧರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net