ನಗರಕೆರೆಯಲ್ಲಿ ಅರಳಿಮರಕ್ಕೆ ಕಟ್ಟೆ ನಿರ್ಮಾಣ

ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿರುವ 100 ವರ್ಷಕ್ಕಿಂತ ಹಳೆಯದಾದ ಅರಳಿಮರಕ್ಕೆ ಸ್ಥಳೀಯ ಯುವಕರು ಕಟ್ಟೆ ನಿರ್ಮಾಣ ಮಾಡುವುದರ ಮೂಲಕ  ಮೂಲಕ ಪಾರಂಪಾರಿಕ ವೃಕ್ಷ ಸಂರಕ್ಷಣೆಯ ಮಹತ್ವವನ್ನು ಜಾಗೃತಿಗೊಳಿಸಿ ಗಮನ ಸೆಳೆದಿದ್ದಾರೆ.
ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿರುವ 100 ವರ್ಷಕ್ಕಿಂತ ಹಳೆಯದಾದ ಅರಳಿಮರಕ್ಕೆ ಸ್ಥಳೀಯ ಯುವಕರು ಕಟ್ಟೆ ನಿರ್ಮಾಣ ಮಾಡುವುದರ ಮೂಲಕ ಮೂಲಕ ಪಾರಂಪಾರಿಕ ವೃಕ್ಷ ಸಂರಕ್ಷಣೆಯ ಮಹತ್ವವನ್ನು ಜಾಗೃತಿಗೊಳಿಸಿ ಗಮನ ಸೆಳೆದಿದ್ದಾರೆ.
Published on
ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದಲ್ಲಿರುವ 100 ವರ್ಷಕ್ಕಿಂತ ಹಳೆಯದಾದ ಅರಳಿಮರಕ್ಕೆ ಸ್ಥಳೀಯ ಯುವಕರು ಕಟ್ಟೆ ನಿರ್ಮಾಣ ಮಾಡುವುದರ ಮೂಲಕ ಪಾರಂಪಾರಿಕ ವೃಕ್ಷ ಸಂರಕ್ಷಣೆಯ ಮಹತ್ವವನ್ನು ಜಾಗೃತಿಗೊಳಿಸಿ ಗಮನ ಸೆಳೆದಿದ್ದಾರೆ.
ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಈ ವೃಕ್ಷಕ್ಕೆ ಈಗ ಹೊಸ ಕಟ್ಟೆ ನಿರ್ಮಾಣಗೊಂಡಿದ್ದು ಗುರುವಾರ ನಾಗರ ವಿಗ್ರಹವನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಸ್ಥಳವನ್ನು ಪೂಜನೀಯ ತಾಣವನ್ನಾಗಿ ರೂಪಿಸಿರುವುದು ವಿಶೇಷವಾಗಿದೆ.
ನಗರಕೆರೆ ಊರು ಗಂಗರಸರ ಕಾಲದಲ್ಲಿ ಪಾಳೆಯ ಪಟ್ಟು ಆಗಿತ್ತು ಎಂಬುದಕ್ಕೆ ಇಲ್ಲಿನ ಶಿಲಾಶಾಸನಗಳು, ಮೂರ್ತಿಗಳು, ದೇವಾಲಯ ಅವಶೇಷಗಳು ಸಾಕ್ಷಿ. ಕಾಲಗರ್ಭದಲ್ಲಿ ಮಸುಕಾದ ಈ ಇತಿಹಾಸಕ್ಕೆ ಯುವಪೀಳಿಗೆಯ ಸಂರಕ್ಷಣಾ ಜಾಗೃತಿ ಹೆಚ್ಚು ಗಮನಸೆಳೆಯುತ್ತಿದೆ.
ಶ್ರೀ ಗಂಗ ಅರಸ್ ವಿವಿಧೋದ್ದೇಶ ಒಕ್ಕೂಟದ ಸಂಸ್ಥಾಪಕ-ಅಧ್ಯಕ್ಷ ನ.ಲಿ.ಕೃಷ್ಣ ಮಾತನಾಡಿ, ನಾಲ್ಕನೇ ತಲೆಮಾರಿನ ಯುವಕರು ಗ್ರಾಮೀಣ ಇತಿಹಾಸ ಸಂರಕ್ಷಣೆಗೆ ಮುಂದಾಗಿರುವುದು ಹೆಮ್ಮೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಭಿನಂದನೆ: ಕಟ್ಟೆ ನಿರ್ಮಾಣ ಹಾಗೂ ವೀರಗಲ್ಲು, ಮಾಸ್ತಿಗಲ್ಲುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮದ ಯುವಕರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net