ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಮತ್ತು ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ಮಾಜಿ ಶಾಸಕ ಶ್ರೀನಿವಾಸ್-75 ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದ್ದೇ ಒಂದು ರಾಜಕಾರಣವಾದರೆ, ಮಂಡ್ಯದ್ದೇ ಮತ್ತೊಂದು ರೀತಿಯ ರಾಜಕಾರಣ ಎಂಬುದು ಜನಜನಿತವಾಗಿದೆ. ಇಂತಹ ಕ್ಷೇತ್ರದಲ್ಲಿ ಎಂ.ಶ್ರೀನಿವಾಸ್ ಅವರು ಮೂರು ಬಾರಿ ಶಾಸಕರಾಗಿದ್ದರೂ ಅಜಾತಶತ್ರುವಾಗಿ ಬೆಳೆದಿದ್ದು ಸೋಜಿಗದ ಸಂಗತಿ. ನಾನು ಕೂಡ ಶಾಸಕ, ಸಚಿವನಾಗಿದ್ದೇನೆ. ಆದರೆ, ನನಗೆ ಪರ ವಿರೋಧ ಎರಡೂ ಕಂಡು ಬಂದಿದೆ. ಎಂ.ಶ್ರೀನಿವಾಸ ಅವರ ವಿಚಾರದಲ್ಲಿ ವಿರೋಧಕ್ಕಿಂತ ಅಭಿಮಾನವೇ ಹೆಚ್ಚಾಗಿ ಕಂಡುಬರುತ್ತದೆ. ಇದೇ ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.