ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಂಡ್ಯ ವಿಶೇಷ ಛಾಪು: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಅಭಿಮತ
ಮಂಡ್ಯ ನಗರದ ಕಲಾಮಂದಿರದ ಆವರಣದಲ್ಲಿ ಕಲಾವಿದರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಒಕ್ಕಲಿಗರ ಸಂಘದ ಸಾಂಸ್ಕೃತಿಕ ಸಮ್ಮಿಲನ
ಕಲಾವಿದರಿಗೆ ಅಭಿನಂದನೆ ಕಾರ್ಯಕ್ರಮ
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಿಂದ ಬೀಳ್ಕೊಡುಗೆ
ಮಂಡ್ಯ: ಬಿಗ್‌ಬಾಸ್ ಸೀಸನ್-12ರಲ್ಲಿ ಗೆಲುವು ಸಾಧಿಸುವ ಮೂಲಕ ಗಿಲ್ಲಿನಟ (ನಟರಾಜ್) ಮಂಡ್ಯದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಬಣ್ಣಿಸಿದರು.
ದೆಹಲಿಯ ಒಕ್ಕಲಿಗರ ಸಂಘ ಆಯೋಜಿಸಿರುವ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮಕ್ಕೆ ತೆರಳುತ್ತಿರುವ ಕಲಾವಿದರನ್ನು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಆವರಣದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಹಲವು ಹೋರಾಟಗಳಿಗೆ ಪ್ರಥಮವಾಗಿದೆ. ಮಾತ್ರವಲ್ಲದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇತ್ತೀಚೆಗೆ ಬಿಗ್‌ಬಾಸ್‌ನಲ್ಲಿ ವಿಜೇತರಾದ ಗಿಲ್ಲಿ ಅವರ ಕಲಾವಂತಿಕೆ ಇಡೀ ರಾಷ್ಟ್ರದ ಗಮನವನ್ನೇ ಸೆಳೆದಿದೆ. ದೇಶ-ವಿದೇಶಗಳಿಂದಲೂ ಅವರಿಗೆ ಮತ ಚಲಾವಣೆಯಾಗಿರುವುದು ಅವರ ಕಲಾ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ದೆಹಲಿಯ ಒಕ್ಕಲಿಗರ ಸಂಘ ಮಂಡ್ಯದ ಕಲಾವಿದರನ್ನು ಆಯ್ಕೆ ಮಾಡಿರುವುದು ಅಭಿನಂದನೀಯ. ಜಿಲ್ಲೆಯ ಕಲಾವಿದರ ಪ್ರತಿಭೆಯನ್ನು ಗುರುತಿಸಿ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಕಲಾವಿದರು ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿ ಜಿಲ್ಲೆಗೆ ಕೀರ್ತಿಯನ್ನು ತರಬೇಕು ಎಂದು ಆಶಿಸಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಸಾಂಸ್ಕೃತಿಕವಾಗಿ ಹಿರಿಮೆಯನ್ನು ಹೊಂದಿರುವ ಮಂಡ್ಯ ಜಿಲ್ಲೆಯ ಕಲಾವಿದರು ದೇಶದ ನಾನಾ ಭಾಗಗಳಲ್ಲಿ ತಮ್ಮ ವಿಜಯ ಪತಾಕೆಯನ್ನು ಹಾರಿಸಿದ್ದಾರೆ. ಅದೇ ರೀತಿ ದೆಹಲಿಯ ಕಾರ್ಯಕ್ರಮದಲ್ಲೂ ಉತ್ತಮ ಪ್ರದರ್ಶನ ನೀಡಬೇಕೆಂದು ಆಶಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಚಿತ್ರನಿರ್ದೇಶಕ ಗೊರವಾಲೆ ಮಹೇಶ್, ಜಾನಪದ ಕಲಾವಿದ ಗೊರವಾಲೆ ರುದ್ರಪ್ಪ, ದೇವರಾಜ್ ಕೊಪ್ಪ, ಲಿಂಗಪ್ಪ, ಪರಮೇಶ್, ಪ್ರದೀಪ್ ಇತರರಿದ್ದರು.
ಇದೇ ವೇಳೆ ಕಲಾವಿದರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಕಿರಣ್‌ಕುಮಾರ್, ನಾಗೇಶ್, ಶಶಾಂಕ್, ಪ್ರೇಮಕುಮಾರಿ, ವೈರಮುಡಿ ಇತರರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.