ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಯತ್ತ ಭಾರತ: ಅಕ್ರಡೈನ್ ಪ್ರೈ.ಲಿ ಸಂಸ್ಥಾಪಕ ಡಾ.ನೀರಜ್‌ಕುಮಾರ್ ಹೇಳಿಕೆ

ಮಂಡ್ಯ ತಾಲೂಕು ಸುಂಡಹಳ್ಳಿ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಬೆಂಗಳೂರಿನ ಅಕ್ರಡೈನ್ ಪ್ರೈ.ಲಿ ಸಂಸ್ಥಾಪಕ ಡಾ.ನೀರಜ್‌ಕುಮಾರ್ ಮಾತನಾಡಿದರು.
ಮಂಡ್ಯ ತಾಲೂಕು ಸುಂಡಹಳ್ಳಿ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಬೆಂಗಳೂರಿನ ಅಕ್ರಡೈನ್ ಪ್ರೈ.ಲಿ ಸಂಸ್ಥಾಪಕ ಡಾ.ನೀರಜ್‌ಕುಮಾರ್ ಮಾತನಾಡಿದರು.
Published on
ಮಂಡ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಇಂಜಿನಿಯರ್ ಮತ್ತು ವಿಜ್ಞಾನಿಗಳ ಮೇಲೆ ಕೊಡುಗೆ ಅಪಾರವಾಗಿದೆ ಎಂದು ಬೆಂಗಳೂರಿನ ಅಕ್ರಡೈನ್ ಪ್ರೈ.ಲಿ ಸಂಸ್ಥಾಪಕ ಡಾ.ನೀರಜ್‌ಕುಮಾರ್ ತಿಳಿಸಿದರು.
ತಾಲೂಕಿನ ಸುಂಡಹಳ್ಳಿ ಬಳಿಯ ಇರುವ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಡ್ರೋಣ್ ತಯಾರು ಮಾಡುವ ತಂತ್ರಜ್ಞಾನ ಅತ್ಯಾವಶ್ಯಕವಾಗಿದೆ. ಈ ಕಾರ್ಯಾಗಾರ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಇಂಟೆಲ್ ಸಂಸ್ಥೆಯ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ ಇಸ್ಮಾಯಿಲ್ ಇಬ್ರಾಹಿಂ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸುತ್ತಿರುವ ಕಾರ್ಯಾಗಾರ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಭಾಗವಹಿಸಿರುವುದು ನನಗೂ ಹೆಮ್ಮೆ ಎನಿಸಿದೆ. ನಾನೂ ಕೂಡ ಗ್ರಾಮೀಣ ಭಾಗದಲ್ಲೇ ವ್ಯಾಸಂಗ ಮಾಡಿ ಟಾಟಾ ಕಂಪನಿ ಸೇರಿದೆ. ಅದರಲ್ಲಿ ಹಾರ್ಡ್ವೇರ್ ಡಿಸೈನ್ ಸಾಫ್ಟವೇರ್ ಸೆಕ್ಯೂರಿಟಿ ಥಿಯರಿ ಎಲೆಕ್ಟ್ರೋ ಮ್ಯಾಗ್ನೆಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ನಾನು ಬೆಳೆದು ಈಗ ಇಂಟೆಲ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿದರು.
ಸಿಇಆರ್‌ಟಿ ಕಾರ್ಯದರ್ಶಿ ಡಾ.ಸಿ.ಜೆ.ಗಂಗಾಧರಗೌಡ ಮಾತನಾಡಿ, ಶಿಕ್ಷಣವು ತರಗತಿಗಳು ಮತ್ತು ಪ್ರಯೋಗಶಾಲೆಯಿಂದಾಚೆಗೆ ಬೆಳೆಯಬೇಕು. ಈ ರೀತಿಯ ಕಾನ್ಪರೆನ್ಸ್‌ಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪರಿಣಿತರೊಡನೆ ಸಂವಾದ ಮಾಡಲು ಜ್ಞಾನವೃದ್ಧಿ ಮಾಡಿ ಕೊಳ್ಳಲು ಸಹಾಯವಾಗುತ್ತದೆ ಎಂದರು.
ಸಿಇಆರ್‌ಟಿ ಅಧ್ಯಕ್ಷ ಡಾ.ಸಂಗಮೇಶ್ವರ್ ಮಾತನಾಡಿ, ಡಾ.ಅಬ್ದುಲ್ ಕಲಾಂ ಅವರ ವಿಜ್ಞಾನವು ಮಾನವನಿಗೆ, ಮಾನವ ಜಗತ್ತಿಗೆ ದೇವರು ನೀಡಿರುವ ಸಂದರವಾದ ಕೊಡುಗೆ. ಅದನ್ನು ಹಾಳು ಮಾಡಬಾರದು. ಮಾನವನ ನಾಗರಿಕತೆಯ ಪ್ರಗತಿಯು ರಸ್ತೆ, ರೈಲು ವಿದ್ಯುತ್ ಮತ್ತು ಇಂಟರ್‌ನೆಟ್‌ಗಳ ಕೊಂಡಿಯಿಂದ ಬೆಸೆದುಕೊಂಡಿದೆ. ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಕೂಡಿ ವ್ಯವಸ್ಥೆ ಇನ್ನೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ, ಡಾ.ಎ.ಪಿ.ಸವಿತಾ ಮಾತನಾಡಿದರು. ಸಮ್ಮೇಳನದಲ್ಲಿ 60ಕ್ಕೂ ಹೆಚ್ಚು ಸಂಶೋಧನಾರ್ತಿಗಳು ತಮ್ಮ ಪ್ರಬಂಧ ಮಂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net