ಶ್ರೀರಂಗಪಟ್ಟಣ: ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದೆ ಕಂಗನಾ ರಾನವತ್ ಅವರ ಚಿತ್ರಗಳನ್ನು ಅಶ್ಲೀಲವಾಗಿ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮಂಡಲದ ಕಾರ್ಯಕರ್ತರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪಟ್ಟಣದ ಟೌನ್ ಪೊಲೀಸ್ ಠಾಣೆಗೆ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಆಗಮಿಸಿದ ಕಾರ್ಯಕರ್ತರು, ಇನ್‌ಸ್ಪೆೆಕ್ಟರ್ ಬಿ.ಜಿ.ಕುಮಾರ್ ಅವರಿಗೆ ದೂರು ಸಲ್ಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪಿ ಡಾ.ಲಕ್ಷ್ಮೀಕಾಂತ್ ಸಿಂಗೆ ಎಂಬಾತನ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸುವಂತೆ ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಪರ ಆಡಳಿತ ಮತ್ತು ಪ್ರಬಲ ನಾಯಕತ್ವಕ್ಕೆ ಹೆಚ್ಚು ಪ್ರಸಿದ್ದಿಯಾಗುತ್ತಿದ್ದು, ಇದನ್ನು ಸಹಿಸದವರು ಈ ರೀತಿ ಅಶ್ಲೀಲವಾಗಿ ಪೋಸ್ಟ್ ಮಾಡಿ ಅವಮಾನಿಸುವ ಹಾಗೂ ಮೋದಿ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಕಾನೂನಾತ್ಮಕವಾಗಿ ಮಟ್ಟಹಾಕಬೇಕು ಎಂದು ಆಕ್ರೋಶ ಹೊರಹಾಕಿದರು.
ಸಾಮಾಜಿಕ ಜಾಲತಾಣಗಳ ಪ್ರಕೋಷ್ಟ ಜಿಲ್ಲಾ ಸಹ ಸಂಚಾಲಕ ರವಿಶರಣ್, ನಗರ ಘಟಕದ ಅಧ್ಯಕ್ಷ ಸುಧಾಕರ್, ಮಂಡಲ ಕಾರ್ಯದರ್ಶಿ ಹೇಮಂತ್, ಸಾಮಾಜಿಕ ಜಾಲತಾಣದ ತಾಲೂಕು ಸಂಚಾಲಕ ಕಿರಣ್ ಕುಮಾರ್ ಸಿಂಗ್, ನಾಗರಾಜ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ನಗರ ಘಟಕದ ಆಧ್ಯಕ್ಷ ವಿಶ್ವನಾಥ್, ಒಬಿಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಮುಂಖಂಡರಾದ ಅಭಿಷೇಕ್ ಗಾಂಜಾಮ್, ಚಂದ್ರು, ರಘು, ಮದನ್ ಇದ್ದರು.