ಅಂಗವಿಕಲೆ ಮೇಲೆ ಅತ್ಯಾಚಾರವೆಸಗಿದ್ದವನ ವಿರುದ್ಧ ದೂರು

ಅಂಗವಿಕಲ ಯುವತಿ ಮೇಲೆ ಅತ್ಯಾಚಾರ
ಅಂಗವಿಕಲ ಯುವತಿ ಮೇಲೆ ಅತ್ಯಾಚಾರ
Published on

ಪ್ರಮುಖ ಮುಖ್ಯಾಂಶಗಳು

  • ಗರ್ಭಿಣಿ ಮಾಡಿ ಮದುವೆ ಆಗಲು ಒಪ್ಪದ ಆರೋಪಿ
ಕೆ.ಆರ್.ಪೇಟೆ : ಅಂಗವಿಕಲ ಯುವತಿ ಮೇಲೆ ಅತ್ಯಾಚಾರವೆಸಗಿಸಿ ಆಕೆಯ ಪಾಲಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಯುವಕನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಸೋಮನಹಳ್ಳಿ ನಿವಾಸಿ ಪೃಥ್ವಿ (26) ಯುವತಿ ಮೇಲೆ ಅತ್ಯಚಾರವೆಸಗಿರುವ ಆರೋಪಿ.
ಯುವತಿ ತಂದೆ ಕೂಲಿ ಕಾರ್ಮಿಕ, ತಾಯಿ ಶಾಲೆಯಲ್ಲಿ ಅಡುಗೆ ತಯಾರಿಕೆ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿ ಅಂಗವಿಕಲ ಪುತ್ರಿ ಒಬ್ಬಳೇ ಇರುತ್ತಿದ್ದಳು. ಒಂದು ವರ್ಷದ ಹಿಂದೆ ಪಾಲಕರು ಕೆಲಸಕ್ಕೆ ಹೋದಾಗ ಮನೆ ಪಕ್ಕದ ಮನೆಯ ಪೃಥ್ವಿ ಯುವತಿ ಮನೆಗೆ ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಯುವತಿ ಮನೆಯವರಿಗೆ ಹೇಳುವುದಾಗಿ ತಿಳಿಸಿದಾಗ, ಆರೋಪಿ ವಿಚಾರ ತಿಳಿಸಿದರೆ ನಿನ್ನ ಪಾಲಕರಿಗೆ ಚಾಕು ಹಾಕುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಬಳಿಕ ಯುವತಿ ಜತೆ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಮದುವೆ ಆಗುವುದಾಗಿ ನಂಬಿಸಿದ್ದಾನೆ.
ಆಕೆ ಗರ್ಭಿಣಿ ಆಗಿರುವುದು ಗೊತ್ತಾಗಿದೆ. ಯುವತಿಯ ಪಾಲಕರು ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಪೃಥ್ವಿಗೆ ಕೇಳಿದ್ದಾರೆ. ಇದಕ್ಕೆ ಯುವಕ ಒಪ್ಪದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ವಿಷಯ ತಿಳಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net