ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಿದ್ಧಗಂಗಾ ಶ್ರೀಗಳ 7ನೇ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ, ಜ್ಯೋತಿ ಹರೀಶ್, ರಾಜಣ್ಣ, ರುದ್ರೇಶ್, ಹರೀಶ್, ನಾಗೇಶ್, ಮಹೇಶ್, ರಾಜು, ಸಾಗರ್, ಶಿವಣ್ಣ, ಯಡಿಯೂರಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ
ಕಿಕ್ಕೇರಿ: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಸಿದ್ಧಗಂಗಾ ಶ್ರೀಗಳ ವಿಚಾರಧಾರೆ ಆಳವಡಿಸಿಕೊಂಡಲ್ಲಿ ಬದುಕು ಸುಂದರವಾಗಲಿದೆ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ರಿವಿಧ ದಾಸೋಹಿಗಳಾಗಿ ಅಕ್ಷರ, ಅನ್ನ, ವಸತಿ ದಾಸೋಹದ ಮೂಲಕ ಲಕ್ಷಾಂತರ ಜನರಿಗೆ ಭಾಗ್ಯವಿಧಾತರಾಗಿದ್ದರು. ಜಾತಿ, ಮತ, ಪಂಥ ಮೀರಿ ಶ್ರಮಿಸಿದ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಬೇಕು ಎಂದರು.
ಮಠಮಾನ್ಯಗಳ ಪರಿಕಲ್ಪನೆಗೆ ಕ್ರಾಂತಿ ತುಂಬಿ, ಜ್ಞಾನಗಂಗೆಯಲ್ಲಿ ವಿದ್ಯಾರ್ಥಿಗಳು ಸುಗಮವಾಗಿ ಸಾಗಲು ಭಾಷ್ಯ ಬರೆದವರು ಶ್ರೀಗಳು. ಆಧುನಿಕ ಬಸವಣ್ಣನವರಾಗಿದ್ದ ಶ್ರೀಗಳು ರಾಜಕೀಯ ಮುಕ್ತ ಸಂತರಾಗಿದ್ದರು. ಇವರ ಆಶ್ರಯದಲ್ಲಿ ಬೆಳೆದ ಸಹಸ್ರಾರು ಮಕ್ಕಳು ಉನ್ನತ ಪದವಿ, ಸಂಸ್ಕಾರವಂತರಾಗಿ ನಾಡಿನಲ್ಲಿ ಬಾಳುತ್ತಿರುವುದು ಎಲ್ಲರ ಸೌಭಾಗ್ಯ ಎಂದು ನುಡಿದರು.