ಕನ್ನಂಬಾಡಿ ಅಮ್ಮನ ಪೂಜೆಗಾಗಿ ಮುಡಿಪು ಸಂಗ್ರಹ

ಕಿಕ್ಕೇರಿಯಲ್ಲಿ ಕನ್ನಂಬಾಡಿ ಅಮ್ಮ ಪೂಜೆಗಾಗಿ ಭಕ್ತರಿಂದ ಸೋಮವಾರ ಮುಡಿಪು ಸಂಗ್ರಹಿಸಲಾಯಿತು. ನಾಗೇಗೌಡ, ಶಿವರಾಮೇಗೌಡ, ಮಂಜೇಗೌಡ, ಪುಟ್ಟರಾಜು ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಕನ್ನಂಬಾಡಿ ಅಮ್ಮ ಪೂಜೆಗಾಗಿ ಭಕ್ತರಿಂದ ಸೋಮವಾರ ಮುಡಿಪು ಸಂಗ್ರಹಿಸಲಾಯಿತು. ನಾಗೇಗೌಡ, ಶಿವರಾಮೇಗೌಡ, ಮಂಜೇಗೌಡ, ಪುಟ್ಟರಾಜು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Kannambadi
ಕಿಕ್ಕೇರಿ: ರೈತರು ಸಮೃದ್ಧ ಬೆಳೆಯಾಗಲು ಪ್ರಾರ್ಥಿಸಿ ಪ್ರತಿವರ್ಷ ಕನ್ನಂಬಾಡಿ ಅಮ್ಮನಿಗೆ ಮುಡಿಪಿನ ಕಾಣಿಕೆ ಸಲ್ಲಿಸುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಮವಾರ ದೇಣಿಗೆ ಸಂಗ್ರಹಿಸಲಾಯಿತು.
ಇಲ್ಲಿನ ರೈತ ಮುಖಂಡರು ಸಾಂಪ್ರದಾಯಿಕವಾಗಿ ನಡೆಸುವ ವಾರ್ಷಿಕ ಕನ್ನಂಬಾಡಿ ಅಮ್ಮ ಹಬ್ಬದ ಮುನ್ನ ಸಾರ್ವಜನಿಕರಿಂದ ದೇವಿಗೆ ಮುಡಿಪಿನ ಕಾಣಿಕೆ ಸಂಗ್ರಹಿಸಲು ತಮಟೆ ವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ಸಾಗಿದರು. ಭಕ್ತರು ಶ್ರದ್ಧಾಭಕ್ತಿಯಿಂದ ಮುಡಿಪಿನ ಹುಂಡಿಗೆ ನಮಿಸಿ ತಮ್ಮ ಇಚ್ಛಾನುಸಾರ ಕಾಣಿಕೆ ಅರ್ಪಿಸಿದರು.
ದೇವಿಗೆ ಸೀರೆ, ರವಿಕೆ, ಬಿಚ್ಚೋಲೆ, ಅರಿಶಿಣ, ಕುಂಕುಮ, ಕಾಯಿ ಮತ್ತಿತರ ಅಷ್ಟದ್ರವ್ಯ ವಸ್ತುಗಳಿಂದ ದೇವಿಗೆ ಮುಡಿಪು ಅರ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಯಿತು. ರೈತರು, ಗ್ರಾಮದ ಜನತೆ ಸುಭಿಕ್ಷತೆ, ಸಮೃದ್ಧ ಮಳೆ ಜತೆ ಉತ್ತಮ ಬೆಳೆಯಾಗಲು ದೇವಿಯಲ್ಲಿ ಪ್ರಾರ್ಥಿಸಲು ವಿನಂತಿಸಿದರು.
ಕನ್ನಂಬಾಡಿ ಗ್ರಾಮಕ್ಕೆ ಜು.28ರ ಮಂಗಳವಾರ ಮುಂಜಾನೆ ತೆರಳಲಿರುವ ಗ್ರಾಮಸ್ಥರು ಕನ್ನಂಬಾಡಿ ಅಮ್ಮನವರಿಗೆ ಭಕ್ತರ ಕಾಣಿಕೆ, ಬಾಗಿನ, ಮಡಿಲು ಅಕ್ಕಿ ಅರ್ಪಿಸಿ ಪೂಜಿಸಲಿದ್ದಾರೆ. ಅದೇ ದಿನದಂದು ಗ್ರಾಮಕ್ಕೆ ವಾಪಸ್ಸಾಗಿ ದೇವಿಯ ಪ್ರಸಾದ ತಂದು ಗದ್ದುಗೆ ನಿರ್ಮಿಸಿ ಪೂಜಿಸಲಾಗುವುದು. ದೇವಿಗೆ ಮಾಂಸದ ಅಡುಗೆಯನ್ನು ನೈವೇದ್ಯವಾಗಿ ಅರ್ಪಿಸಿ, ಸಾಮೂಹಿಕ ಭೋಜನ ವ್ಯವಸ್ಥೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಮುಖಂಡರು ತಿಳಿಸಿದರು.
ನಾಗೇಗೌಡ, ಶಿವರಾಮೇಗೌಡ, ಕಾಯಿ ಮಂಜೇಗೌಡ, ಪುಟ್ಟೇಗೌಡ, ಕೆ.ವೈ. ಹರೀಶ್, ಉಮೇಶ್, ಕೆ.ಜಿ. ಪುಟ್ಟರಾಜು, ವೆಂಕಟೇಶ್, ಕೆಂಪಣ್ಣ, ರಘು, ಮಧುಕರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net