ಎಮ್ಮೆಮಾಡುವಿನಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಕಾರ್ಯಕ್ರಮಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಅವರ ಕಚೇರಿಯಲ್ಲಿ ಆಹ್ವಾನಿಸಲಾಯಿತು. ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ, ತಾಜಲ್ ಇಸ್ಲಾಂ ಮುಸ್ಲಿಂ ಜಮಾತ್ ಅಧ್ಯಕ್ಷ ಕೆ.ಎಂ.ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷ ಅಬೂಬಕರ್ ಸಖಾಫಿ, ಆಡಳಿತ ಮಂಡಳಿ ಸದಸ್ಯರಾದ ಮೆನ್ ಮಹಮ್ಮದ್, ಹನೀಫ್ ಎಮ್.ಎ. ಹಾಗೂ ಧರ್ಮಗುರುಗಳು ಆಹ್ವಾನ ಪತ್ರಿಕೆಯನ್ನು ನೀಡಿ ಉರುಸ್ ಸಮಾರಂಭಕ್ಕೆ ಆಹ್ವಾನಿಸಿದರು.