ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ವಾಹನಗಳ ದಾಖಲೆ ಪರಿಶೀಲನೆ ನಡೆಸಿದರೆ, ನಮ್ಮ ಅಭ್ಯಂತರವಿಲ್ಲ. ಆದರೆ ಹಳ್ಳಿಗಳಲ್ಲಿ ರಾತ್ರಿ ವೇಳೆ ಜಮೀನಿನ ಕಡೆ ಹೋಗುವ ರೈತರ ಬೈಕ್‌ಗಳನ್ನು ತಡೆದು ದಾಖಲೆ ಕೇಳುವುದು ಸರಿಯಲ್ಲ. ರೈತರು ಜಮೀನಿಗೆ ಹೋಗುತ್ತಾರೆ. ಜಾನುವಾರುಗಳಿಗೆ ಮೇವು ತರಲು ಹೋಗುತ್ತಾರೆ ಅಲ್ಲಿಗೂ ಬೈಕ್ ದಾಖಲೆ ತೆಗೆದುಕೊಂಡು ಹೋಗಬೇಕೆ? ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಜಮೀನು ಕಡೆಗೆ ಹೋಗುವ ರೈತರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.