ವ್ಯವಹಾರಿಕ ಜ್ಞಾನ ವೃದ್ಧಿಗೆ ಮಕ್ಕಳ ಸಂತೆ ಅತ್ಯಗತ್ಯ

ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದ ಸ್ಪೂರ್ತಿಧಾಮ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ಸಂಸ್ಥೆಯ ಕಾರ್ಯದರ್ಶಿ ಶಿವರಾಜ್ ಚಾಲನೆ ನೀಡಿದರು. ಭವಾನಿ, ಮಹದೇವು, ನಂದಿನಿ, ಚಾಂದಿನಿ, ವಿನುತಾ, ಶಿವಲಿಂಗಯ್ಯ ಇದ್ದರು.
ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದ ಸ್ಪೂರ್ತಿಧಾಮ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ಸಂಸ್ಥೆಯ ಕಾರ್ಯದರ್ಶಿ ಶಿವರಾಜ್ ಚಾಲನೆ ನೀಡಿದರು. ಭವಾನಿ, ಮಹದೇವು, ನಂದಿನಿ, ಚಾಂದಿನಿ, ವಿನುತಾ, ಶಿವಲಿಂಗಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಫೂರ್ತಿಧಾಮ ಶಾಲೆ ಕಾರ್ಯದರ್ಶಿ ಶಿವರಾಜ್ ಅಭಿಮತ
ಮದ್ದೂರು: ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ವೃದ್ಧಿಗೆ ಮಕ್ಕಳ ಸಂತೆ ಅತಗತ್ಯ ಎಂದು ಸ್ಫೂರ್ತಿಧಾಮ ಶಾಲೆಯ ಕಾರ್ಯದರ್ಶಿ ಶಿವರಾಜ್ ತಿಳಿಸಿದರು.
ತಾಲೂಕಿನ ತೊರೆಶೆಟ್ಟಿಹಳ್ಳಿಯ ಸ್ಫೂರ್ತಿಧಾಮ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಸಂತೆ ವ್ಯಾಪಾರ ಜ್ಞಾನ, ಮಕ್ಕಳು ಹಣ ನಿರ್ವಹಣೆ, ಲೆಕ್ಕಾಚಾರ ಮತ್ತು ಲಾಭದ ಬಗ್ಗೆ ತಿಳಿಯುವಂತೆ ಮಾಡುತ್ತದೆ. ಹಣದ ಮೌಲ್ಯ ಮತ್ತು ಉಳಿತಾಯದ ಬಗ್ಗೆ ಅರಿವು ಮೂಡಿಸುತ್ತದೆ.
ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಜತೆಗೆ ಸ್ವಾವಲಂಬನೆ ಮತ್ತು ಹೊಸ ಕಲ್ಪನೆಗಳನ್ನು ಪ್ರೋತ್ಸಾಹಿಸುವ ಜತೆಗೆ ಗ್ರಾಹಕರೊಂದಿಗೆ ಹೇಗೆ ಮಾತನಾಡಬೇಕು ಮತ್ತು ವ್ಯವಹಾರ ಮಾಡಬೇಕು ಎಂದು ಕಲಿಸುತ್ತದೆ ಎಂದರು.
ನಮ್ಮ ಶಾಲೆಯಲ್ಲಿ ಮಕ್ಕಳ ಸಂತೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಕೊಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಿದೆ ಎಂದರು.
ಮಕ್ಕಳ ಸಂತೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಬಗೆ ಬಗೆ ತಿನಿಸುಗಳನ್ನು ತಯಾರು ಮಾಡಿಕೊಂಡು ಬಂದು ಯಾರಿಗೆ ಬೇಕು ತಾಜಾ ತಾಜಾ ಚುರುಮುರಿ, ಬಿಸಿ ಬಿಸಿ ಗೋಬಿ ಮಂಚೂರಿ, ಮದ್ದೂರು ವಡೆ, ಮೆಣಸಿನಕಾಯಿ ಬಜ್ಜಿ ಎಂದು ಕೂಗುತ್ತಾ... ತರಕಾರಿ, ಸೊಪ್ಪು, ತಿಂಡಿ, ಪಾನೀಯ ಸೇರಿದಂತೆ ಇನ್ನಿತರ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದದ್ದು ಪಾಲಕರ ಹಾಗೂ ಶಿಕ್ಷಕರ ಗಮನ ಸೆಳೆಯಿತು.
ಮುಖ್ಯ ಶಿಕ್ಷಕಿ ಭವಾನಿ, ಸಿಆರ್‌ಪಿ ಮಹದೇವು, ಶಿಕ್ಷಕರಾದ ನಂದಿನಿ, ಚಾಂದಿನಿ, ವಿನುತಾ, ಶಿವಲಿಂಗಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net