ಮಾ.23ರಿಂದ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ

ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ
ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ
  • ವಸ್ಥಾಪನಾ ಸಮಿತಿ ಅಧ್ಯಕ ್ಷಕನಗೋನಹಳ್ಳಿ ಪರಮೇಶ್‌ಗೌಡ
ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಮಾ.23ರಿಂದ ಏಪ್ರಿಲ್ 3ರವರೆಗೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ ್ಷಕನಗೋನಹಳ್ಳಿ ಪರಮೇಶ್‌ಗೌಡ ಹೇಳಿದರು.
ಮೇಲುಕೋಟೆಯಲ್ಲಿ ಆಯೋಜಿಸಿದ್ದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಅವರು, ಮಾ.28ರ ರಾತ್ರಿ ವೈರಮುಡಿ ಕಿರೀಟಧಾರಣೆ ಮಹೋತ್ಸವ, 31ರಂದು ಮಹಾರಥೋತ್ಸವ ಹಾಗೂ ಏ.1ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಜತೆಗೆ ಆಕರ್ಷಕ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುತ್ತದೆ ಎಂದರು.
ಉತ್ಸವ ನಡೆಯುವ ಬೀದಿಗಳ ಎರಡೂ ಕಡೆಗಳಲ್ಲಿರುವ ಚರಂಡಿಗಳಿಗೆ ಭಕ್ತರು ಬೀಳುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ. ಬ್ರಹ್ಮೋತ್ಸವದ ವೇಳೆ ಉತ್ಸವಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಆಯೋಜಿಸಿದ್ದು ಸೇವೆ ಮಾಡಲು ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. ಪುಷ್ಪಾಲಂಕಾರ, ಪ್ರಸಾದ, ದೀಪಾಲಂಕಾರ ಸೇರಿದಂತೆ ಯಾವುದೇ ಸೇವೆಯನ್ನು ಮಾಡಬಹುದಾಗಿದ್ದು, ಸೇವಾರ್ಥದಾರರ ಹೆಸರನ್ನು ವೈರಮುಡಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದರ ಜತೆಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುತ್ತದೆ ಎಂದರು.
ಕಲ್ಯಾಣಿ, ಬೆಟ್ಟ ಹಾಗೂ ರಾಜಬೀದಿ ಸ್ಮಾರಕಗಳಿಗೆ ನಯನಮನೋಹರ ದೀಪಾಲಂಕಾರ ಮಾಡಲಾಗುತ್ತದೆ. ಸರಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ವಕೀಲ ಕಾಡೇನಹಳ್ಳಿ ಸತೀಶ್ ಮಾತನಾಡಿ, ದೇವಾಲಯ ಮುಂಭಾಗ ಶಾಶ್ವತ ಚಪ್ಪರ ನಿರ್ಮಾಣ ಮಾಡಲಾಗುತ್ತದೆ. ದೇವಾಲಯ ಮುಂಭಾಗವಿರುವ ಹಳೆಯ ಬ್ಯಾರಿಕೇಡ್‌ಗಳನ್ನು ತೆಗೆದು ಎಸ್‌ಎಸ್ ಬ್ಯಾರಿಕೇಡ್ ಹಾಕಲಾಗುತ್ತದೆ. ಅನಗತ್ಯ ನಾಮಫಲಕ, ಕಬ್ಬಿಣದ ಕಂಬಗಳನ್ನು ತೆಗೆಸಲಾಗುತ್ತದೆ. ಬ್ರಹ್ಮೋತ್ಸವ ವೇಳೆ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೋತಿ, ಬಿಡಾಡಿ ದನಗಳು, ಆಡುಗಳಿಂದ ಭಕ್ತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಅಲ್ಲದೆ ಆಹ್ವಾನ ಪತ್ರಿಕೆಯ ವಿನ್ಯಾಸವನ್ನು ಹೊಸತನಕ್ಕೆ ಬದಲಾಯಿಸಿ ಆಕರ್ಷಕವಾಗಿ ಮುದ್ರಿಸಲಾಗುತ್ತದೆ. ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿ ದೇವಾಲಯದ ಹೊರ ಹಾಗೂ ಒಳ ಆವರಣ, ಸ್ಮಾರಕಗಳ ಬಳಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಭಕ್ತರಿಗೆ ಶುದ್ಧೀಕರಿಸಿದ ಕುಡಿಯುವ ನೀರು ನೀಡಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.
ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ಹಿರಿಯ ಸದಸ್ಯರಾದ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಡಾ ವೆಂಕಟರಾಮೇಗೌಡ ವೈರಮುಡಿ ಜಾತ್ರೆಯ ಬಗ್ಗೆ ಹಲವು ಪ್ರಮುಖ ಸಲಹೆ ನೀಡಿದರು. ಸದಸ್ಯರಾದ ಶೋಭಾ, ಡಾ.ಪ್ರೀತಿ ಮಹದೇವ್ ವೆಂಕಟೇಶ್, ರಾಜು ಕೆ.ಎಚ್ ಪುಟ್ಟಸ್ವಾಮಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಭಾಗವಹಿಸಿದ್ದರು.
ಕಲ್ಯಾಣಿ ಪೂಜಾ ಶುಲ್ಕ ರದು ್ದ : ಸಾಮಾನ್ಯ ಭಕ್ತರ ಒತ್ತಾಯಕ್ಕೆ ಮನ್ನಣೆ ನೀಡಿ ಕಲ್ಯಾಣಿ ಪೂಜೆಗೆ ನಿಗದಿ ಮಾಡಿದ್ದ 20 ರೂ. ಶುಲ್ಕವನ್ನು ರದ್ದು ಮಾಡಲಾಗಿದೆ ಎಂದಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ ್ಷಪರಮೇಶ್‌ಗೌಡ, ಜಾತ್ರಾ ಅವಧಿಯಲ್ಲಿ ವಿಶೇಷ ದರ್ಶನಕ್ಕೆ ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ದೇವಾಲಯದ ಚಿನ್ನದ ಗೋಪುರದ ಬಳಿ ವಿಶೇಷ ಹುಂಡಿಯಿಡಲು ತೀರ್ಮಾನಿಸಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net