ವಿದ್ಯಾರ್ಥಿ ಕುಟುಂಬಕ್ಕೆ ಆರ್ಥಿಕ ಸಹಾಯ

ಮದ್ದೂರು ನಗರದ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟ್‌ನ ಶಾಲಾ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಬಂಧಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಶಾಲೆಯ ವಿದ್ಯಾರ್ಥಿ ಪಾಲಕರಿಗೆ ಸಂಸ್ಥೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು. ಎಂ.ಸ್ವರೂಪ್‌ಚಂದ್, ಸಿ.ಅಪೂರ್ವಚಂದ್ರ, ವರದರಾಜು, ಯು.ಎಸ್.ರವಿ, ಯು.ಎಸ್.ಶಿವಕುಮಾರ್ ಇದ್ದರು.

Published on
ಮದ್ದೂರು: ನಗರದ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟ್‌ನ ಶಾಲಾ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಶಾಲೆಯ ವಿದ್ಯಾರ್ಥಿಯ ಪಾಲಕರಿಗೆ ಸಂಸ್ಥೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು.
ನಗರದ ಎಚ್.ಕೆ.ವೀರಣ್ಣಗೌಡ ಕಾಲೇಜಿನ ಆಡಳಿತ ಕಚೇರಿಯಲ್ಲಿ ಮಂಗಳವಾರ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ ಚಂದ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಎಚ್.ಎಸ್.ಹರ್ಷಿತಾ ಅವರ ಪಾಲಕರಿಗೆ ಸಹಾಯ ಧನದ ಚೆಕ್ ವಿತರಿಸಿ ಮಾತನಾಡಿ, ಅನಿರೀಕ್ಷಿತವಾದ ಅಪಘಾತದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಗಾಯಗೊಂಡಿರುವುದು ತುಂಬಾ ದುಃಖಕರ ವಿಷಯ. ಗಾಯಗೊಂಡಿದ್ದ ಬಹುತೇಕ ವಿದ್ಯಾರ್ಥಿಗಳು ಗುಣಮುಖರಾಗಿದ್ದು ಒಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿತ್ತು. ಗಾಯಗೊಂಡ ವಿದ್ಯಾರ್ಥಿ ಪಾಲಕರು ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಸಂಸ್ಥೆ ವತಿಯಿಂದ ಸಹಾಯಧನ ನೀಡುತ್ತಿದ್ದೇವೆ. ವಿದ್ಯಾರ್ಥಿಗೆ ಎಸ್‌ಎಸ್‌ಎಲ್‌ಸಿವರೆಗೂ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಎಂ.ಎಚ್. ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಡಾ.ಎಚ್.ಕೆ. ಮರಿಯಪ್ಪ ಕಾನ್ವೆಂಟ್‌ನ ಮುಖ್ಯ ಶಿಕ್ಷಕ ವರದರಾಜು, ಆಡಳಿತಾಧಿಕಾರಿ ಯು.ಎಸ್.ರವಿ, ಪಾಲಕರಾದ ಶಿವಕುಮಾರ್, ರಾಮೇಗೌಡ, ಚೆಲುವರಾಜು, ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಪ್ರಾಧ್ಯಾಪಕ ಚಂದನ್, ಅಂದಾನಿ ಗೌಡ, ನಾಗರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net