ಚಂದ್ರವನ ಆಶ್ರಮದ ಸಾಮಾಜಿಕ ಕಾರ್ಯ ಶ್ಲಾಘನೀಯ

ಶ್ರೀರಂಗಪಟ್ಟಣ ಹೊರವಲಯದ ಪಶ್ಚಿಮವಾಹಿನಿಯ ಚಂದ್ರವನದ ಚಂದ್ರವನ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳ ತುಲಾಭಾರ ನೆರವೇರಿಸಲಾಯಿತು.
ಶ್ರೀರಂಗಪಟ್ಟಣ ಹೊರವಲಯದ ಪಶ್ಚಿಮವಾಹಿನಿಯ ಚಂದ್ರವನದ ಚಂದ್ರವನ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳ ತುಲಾಭಾರ ನೆರವೇರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು
  • ಚಂದ್ರವನ ಆಶ್ರಮ
ಶ್ರೀರಂಗಪಟ್ಟಣ: ಸಮಾಜದ ಸ್ವಾಸ್ಥ್ಯ ಕಾಯುವಲ್ಲಿ ಹಾಗೂ ಸುಧಾರಣೆಗೊಳಿಸುವಲ್ಲಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ಮತ್ತು ಚಂದ್ರವನ ಆಶ್ರಮದ ಸಾಮಾಜಿಕ ಕಾರ್ಯಗಳು ಸರ್ವಕಾಲಕ್ಕೂ ಶ್ಲಾಘನೀಯ ಎಂದು ರಾಜ್ಯ ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.
ಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯ ಚಂದ್ರವನದ ಚಂದ್ರವನ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಮರಿದೇವರು ಶಿವಯೋಗಿ ಶ್ರೀಗಳ 132ನೇ ವರ್ಷದ ಜಯಂತಿ, 27ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಮತ್ತು ತುಲಾಭಾರ, 159ನೇ ಬೆಳದಿಂಗಳ ಕಾವೇರಿ ದೀಪಾರತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡುವ ಜತೆಗೆ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯ 2ನೇ ಮಹಡಿ ಉದ್ಘಾಟಿಸಿ ಮಾತನಾಡಿದರು.
ಚಂದ್ರವನ ಆಶ್ರಮ ಧಾರ್ಮಿಕ-ಸಂಸ್ಕೃತಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಮಾಜದಲ್ಲಿನ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಜತೆಗೆ ಜನರನ್ನು ಆರೋಗ್ಯವಂತರನ್ನಾಗಿಸಲು ಶ್ರಮಿಸುತ್ತಿದೆ. ನಾನು ಕೂಡ ಒತ್ತಡ ನಿವಾರಣೆ ಹಾಗೂ ಆರೋಗ್ಯ ಸುಧಾರಣೆಗಾಗಿ ಶ್ರೀ ಮಠದಲ್ಲಿ ಕೆಲಕಾಲ ವಾಸ್ತವ್ಯ ಹೂಡಿ ಶ್ರೀಗಳಿಂದ ಅರೋಗ್ಯ ಮತ್ತು ಮಾನಸಿಕ ನೆಮ್ಮದಿ ಗಳಿಸಿದ್ದೇನೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ.ತ್ರಿನೇತ್ರ ಮಹಂತ ಶಿವಯೋಗಿ, ಮರಿದೇವರು ಶ್ರೀಗಳ ಮಾರ್ಗದರ್ಶನದಂತೆ ಅವರ ಹಾದಿಯಲ್ಲಿ ಮಠ ಸಾಗುತ್ತಿದೆ. ಪ್ರಾಮಾಣಿಕ ಸೇವಾ ಕಾರ್ಯಗಳಿಂದ ಭಕ್ತರನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಅವರ ನೆರವಿನಿಂದಲೇ ಲೋಕಕಲ್ಯಾಣಾರ್ಥ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಆಯ್ಕೆಯಾದ ಪುಸ್ತಕದ ಮನೆ ಖ್ಯಾತಿಯ ಅಂಕೇಗೌಡರನ್ನು ಶ್ರೀಮಠದ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಶಿವಕುಮಾರ್, ಐಎಎಸ್ ಅಧಿಕಾರಿ ಶ್ರೀಪಾದ, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಶ್ರೀ ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net