ಮಳವಳ್ಳಿ ತಾಲೂಕಿನಾದ್ಯಂತ ಕಿಚ್ಚುಹಾಯಿಸಿ ಸಂಭ್ರಮ

ಮಳವಳ್ಳಿ ಕೋಟೆ ಬೀದಿಯ ಪ್ರಮುಖ ಬಡಾವಣೆಗಳಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಜ್ಞೇಶ್ವರ, ಸಾರಂಗಪಾಣಿ ಹಾಗೂ ಗಂಗಾಧರೇಶ್ವರ ಉತ್ಸವ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಮಳವಳ್ಳಿ ಕೋಟೆ ಬೀದಿಯ ಪ್ರಮುಖ ಬಡಾವಣೆಗಳಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಜ್ಞೇಶ್ವರ, ಸಾರಂಗಪಾಣಿ ಹಾಗೂ ಗಂಗಾಧರೇಶ್ವರ ಉತ್ಸವ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
Published on

ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮೆರವಣಿಗೆ

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ದೇವಸ್ಥಾನಗಳಲ್ಲಿ ಗುರುವಾರ ಮರಕ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದರೆ ರೈತಾಪಿ ವರ್ಗ ತಮ್ಮಲ್ಲಿರುವ ಜಾನುವಾರುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸುವ ಮೂಲಕಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ಪಟ್ಟಣದ ಮೂಲೇ ಗಣೇಶ, ಸಾರಂಗಪಾಣಿ, ಗಂಗಾಧರೇಶ್ವರ, ಮಹದೇಶ್ವರ, ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ತೆಂಕಹಳ್ಳಿ ಶನೇಶ್ವರ, ಬೆಳಕವಾಡಿ ಕಾಶಿವಿಶ್ವನಾಥ, ಪೂರಿಗಾಲಿ ಪಾತಾಳೇಶ್ವರ, ಮತ್ತಿತಾಳೇಶ್ವರ ಹಾಗೂ ವಿವಿಧ ಪುರಾಣ ಪ್ರಸಿದ್ಧ ಹೊಂದಿರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಉತ್ಸವ ಮೂರ್ತಿಗಳ ಮೆರವವಣಿಗೆ ಜರುಗಿದವು. ದೇವಾಲಯಗಳಿಗೆ ಭಕ್ತರು ತೆರಳಿ ಸರದಿಯಲ್ಲಿ ನಿಂತು ದರ್ಶನ ಪಡೆಯುವುದರ ಜತೆಗೆ ಪೂಜೆ ಸಲ್ಲಿಸಿ ನೆರೆದವರಿಗೆ ಎಳ್ಳು, ಬೆಲ್ಲ ನೀಡಿ ಹಬ್ಬದ ಶುಭ ಕೋರಿದರು. ಗ್ರಾಮೀಣ ಪ್ರದೇಶಗಳಲ್ಲಿ ಅನ್ನದಾತರು ಹೊಲ-ಗದ್ದೆಗಳಲ್ಲಿ ತಾವು ಬೆಳೆದ ಬೆಳೆಗಳ ರಾಶಿಗೆ ಪೂಜೆ ಸಲ್ಲಿಸುವುದರ ಜತೆಗೆ ರಾಸುಗಳನ್ನು ಶುಚಿಗೊಳಿಸಿ ವಿವಿಧ ಬಣ್ಣ, ಬಲೂನ್ ಹಾಗೂ ಹೂಗಳಿಂದ ಸಿಂಗರಿಸಿ ಕಿಚ್ಚಾಯಿಸುವ ಮೂಲಕ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಸಂಕ್ರಮಣವನ್ನು ಸಂಭ್ರಮಿಸಿದರು.
ಹಲವು ಗ್ರಾಮಗಳಲ್ಲಿ ಜೋಡೆತ್ತು ಮತ್ತು ಹಸುಗಳನ್ನು ಮಂಗಳವಾದ್ಯದೊಡನೆ ಮೆರವಣಿಗೆ ಮಾಡಿದರು. ಕಿಚ್ಚಾಯಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ಅವಘಡಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾನುವಾರುಗಳ ಕಿಚ್ಚು ಹಾಯಿಸುವ ಕಾರ್ಯ ನೆರವೇರಿತು. ಹಳ್ಳಿಗಾಡಿನ ಅನ್ನದಾತದ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು.
ತಾಲೂಕಿನ ಚಿಕ್ಕಮುಲಗೂಡು ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಶಾಲೆಯ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೈತರ ಕೃಷಿಗೆ ಬಳಸುತ್ತಿದ್ದ ಉಪಕರಣಗಳು ಹಾಗೂ ದವಸ ಧಾನ್ಯಗಳನ್ನು ಅಳತೆ ಮಾಡುತ್ತಿದ್ದ ಸೇರು, ಕೊಳಗ ಮತ್ತು ಇತರ ಪರಿಕರಗಳ ವಸ್ತುಪ್ರದರ್ಶನ ಹಾಗೂ ತಾವು ಬೆಳೆದ ಬೆಳೆಗಳ ರಾಶಿಕಟ್ಟಿ ಮತ್ತು ಕಣವನ್ನು ನಿರ್ಮಾಣ ಮಾಡಿ ಪೂಜೆ ಸಲ್ಲಿಸುವುದು ಸೇರಿದಂತೆ ರಾಸುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net