ಬಹುತೇಕ ವಾಹನ ಚಾಲಕರು ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸುತ್ತಾರೆ. ಆದರೆ, ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕೆಂದು ಅವರು ಹೆಲ್ಮೆಟ್ ಧರಿಸುವುದಿಲ್ಲ ಎಂದು ವಿಷಾಧಿಸಿದರು. ಅಪಘಾತದಿಂದ ತುರ್ತು ಪರಿಸ್ಥಿತಿಯಲ್ಲಿರುವವರ ಜೀವ ರಕ್ಷಣೆಗೆ ಅತ್ಯಂತ ಅಮೂಲ್ಯವಾದ ರಕ್ತ ಸಂಗ್ರಹಿಸಿ ಕೊಡುತ್ತಿರುವ ಜೀವಧಾರೆ ಟ್ರಸ್ಟ್‌ನ ಚಾಲನಾ ಶಕ್ತಿಯಾದ ನಟರಾಜ್ ಮತ್ತವರ ತಂಡಕ್ಕೆ ಶುಭವಾಗಲೆಂದು ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ನಟರಾಜು, ಪ್ರಶಾಂತ್, ಶಶಿಧರ್, ಚಂದ್ರ, ಬೆಟ್ಟಪ್ಪ, ಮಧು, ಸಂತೋಷ್, ನವೀನ್, ವಿನಯ್, ಎಂ.ಬಿ.ರಮೇಶ್ ಇತರರಿದ್ದರು.